'ಮಾವಿನ ಎಲೆಯಲ್ಲಿ ಮಧುಮೇಹ ನಿಯಂತ್ರಿಸುವ ಶಕ್ತಿಇದೆಯಂತೆ.! - BC Suddi
‘ಮಾವಿನ ಎಲೆಯಲ್ಲಿ ಮಧುಮೇಹ ನಿಯಂತ್ರಿಸುವ ಶಕ್ತಿಇದೆಯಂತೆ.!

‘ಮಾವಿನ ಎಲೆಯಲ್ಲಿ ಮಧುಮೇಹ ನಿಯಂತ್ರಿಸುವ ಶಕ್ತಿಇದೆಯಂತೆ.!

 

ಮಾವು ನಮಗೆಲ್ಲರಿಗೂ ಇಷ್ಟ. ಇದರಲ್ಲಿ ಹಲವಾರು ಪೋಷಕಾಂಶಗಳು ಇವೆ. ಅದೇ ಮಾವಿನ ಎಲೆ ಕೂಡ ಹಲವಾರು ಆರೋಗ್ಯ ಗುಣ ಹೊಂದಿದೆ.

ಮಾವಿನ ಎಲೆಗಳಲ್ಲಿ ಹಲವಾರು ವಿಧದ ಪೋಷಕಾಂಶಗಳು ಇವೆ. ಹಸಿರಾದ ಎಲೆಗಳಲ್ಲಿ ಪೆಕ್ಟಿನ್, ನಾರಿನಾಂಶ ಮತ್ತು ವಿಟಮಿನ್ ಸಿ ಇದೆ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡುವುದು.

10-15 ಮಾವಿನ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ರಾತ್ರಿಯಿಡೀ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ನೀರು ಕುಡಿಯಿರಿ.

ಮಾವಿನ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ, ಅದನ್ನು ಪುಡಿ ಮಾಡಿ. ಪ್ರತಿದಿನ 1 ಚಮಚ ಈ ಪುಡಿಯನ್ನು ಸೇವಿಸುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

ಮಾವುಗಳ ಎಲೆಯ ಚಹಾ ಕುಡಿದರೆ ಜ್ವರ, ಭೇದಿ, ನಿದ್ರಾಹೀನತೆ, ಉಬ್ಬಿರುವ ರಕ್ತನಾಳ, ಅಸ್ತಮಾ & ಶೀತಗಳಂತಹ ಸಮಸ್ಯೆ ದೂರವಾಗುತ್ತದೆ.

ವಿಟಮಿನ್ ಸಿ, ನಾರಿನಾಂಶ ಮತ್ತು ಪೆಕ್ಟಿನ್ ಹೊಂದಿರುವಂತಹ ಮಾವಿನ ಎಲೆಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ ಆಗಿರುವುದು.

ಈ ಹಸಿರೆಲೆಗಳು ರಕ್ತದೊತ್ತಡವನ್ನು ನಿರ್ವಹಿಸಲು ಮತ್ತು ರಕ್ತನಾಳಗಳನ್ನು ಬಲಪಡಿಸಲು ನೆರವಾಗುವುದು. ಇದರಿಂದ ರಕ್ತನಾಳ ಉಬ್ಬುವ ಸಮಸ್ಯೆಯು ಕಡಿಮೆ ಆಗುವುದು. ಇದರ ಹೊರತಾಗಿ ಇದು ಕಿನಡಿ ಸಮಸ್ಯೆ ಮತ್ತು ಶ್ವಾಸಕೋಶದ ಸಮಸ್ಯೆಗೂ ಪರಿಣಾಮಕಾರಿ.