ವಿವಾಹಕ್ಕಾಗಿ ಕೇವಲ ಶಾರ್ಟ್ಸ್ ಧರಿಸಿ ಹಸೆಮಣೆಯಲ್ಲಿ ಕೂತ ವರ - ಪೋಟೊ ವೈರಲ್ - BC Suddi
ವಿವಾಹಕ್ಕಾಗಿ ಕೇವಲ ಶಾರ್ಟ್ಸ್ ಧರಿಸಿ ಹಸೆಮಣೆಯಲ್ಲಿ ಕೂತ ವರ – ಪೋಟೊ ವೈರಲ್

ವಿವಾಹಕ್ಕಾಗಿ ಕೇವಲ ಶಾರ್ಟ್ಸ್ ಧರಿಸಿ ಹಸೆಮಣೆಯಲ್ಲಿ ಕೂತ ವರ – ಪೋಟೊ ವೈರಲ್

ಜಕಾರ್ತಾ:  ಇಂಡೋನೇಷ್ಯಾದ ನವ ದಂಪತಿಯೊಂದು ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಆಶ್ಚರ್ಯವೆಂದರೆ ಈ ಫೋಟೋದಲ್ಲಿ ವರ ಶಾರ್ಟ್ಸ್ ಹೊರತುಪಡಿಸಿ ಬೇರೆ ಯಾವುದನ್ನು ಧರಿಸದೇ ವಧುವಿನ ಪಕ್ಕ ಕುಳಿತುಕೊಂಡಿದ್ದಾನೆ.

ಮದುವೆಯೊಂದರಲ್ಲಿ ವಧು ಸಂಪ್ರಾದಾಯಿಕ ಉಡುಗೆ ತೊಟ್ಟು ಕುಳಿತುಕೊಂಡಿದ್ದು, ವರ ಮೊಣಕಾಲು ಪ್ಲಾಸ್ಟರ್ ಅಂಟಿಸಿಕೊಂಡು, ತೋಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಕುಳಿತುಕೊಂಡಿರುತ್ತಾನೆ.

ಇನ್ನು ಈ ಫೋಟೋವನ್ನು ದಂಪತಿ ಅವರ ಟ್ವೀಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋ ವೈರಲ್ ಆಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ವಧು, ನನ್ನ ಪತಿ ಪೆಟ್ರೋಲ್ ತರಲು ಹೋಗಿದ್ದು ದಾರಿಯಲ್ಲಿ ಬರುವಾಗ ಪ್ರಜ್ಞೆ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದು, ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಅಲ್ಲದೆ ಹಲವು ಕಡೆ ಗಾಯಗೊಂಡಿದ್ದಾರೆ. ಹೀಗಾಗಿ ಮದುವೆಯ ಸಮಯದಲ್ಲಿ ಅವರು ಉಡುಪನ್ನು ಧರಿಸಲು ಆಗಲಿಲ್ಲ ಎಂದು ತಿಳಿಸಿದ್ದಾರೆ.

ನವದೆಹಲಿ: ಕೊರೋನಾ ನಿಯಂತ್ರಣಕ್ಕೆ ದೇಶದಲ್ಲಿ ವ್ಯಾಕ್ಸಿನ್ ಉತ್ಸವ-ಪ್ರಧಾನಿ ನರೇಂದ್ರ ಮೋದಿ

ಈ ಫೋಟೋ ಸದ್ಯ ವೈರಲ್ ಆಗುತ್ತಿದ್ದಂತೆಯೇ 3000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದ್ದು, ನೂರಾರು ಕಮೆಂಟ್‍ಗಳ ಕೂಡ ಬರುತ್ತಿದೆ ಎನ್ನಲಾಗಿದೆ.

error: Content is protected !!