ಕೊರೊನಾ ಎರಡನೇ ಅಲೆ : ಸರಿಯಾದ ಸಮಯಕ್ಕೆ ಬಂದ ಪ್ರಾಣವಾಯು : ಉಳಿದವು 500 ಜೀವ... - BC Suddi
ಕೊರೊನಾ ಎರಡನೇ ಅಲೆ : ಸರಿಯಾದ ಸಮಯಕ್ಕೆ ಬಂದ ಪ್ರಾಣವಾಯು : ಉಳಿದವು 500 ಜೀವ…

ಕೊರೊನಾ ಎರಡನೇ ಅಲೆ : ಸರಿಯಾದ ಸಮಯಕ್ಕೆ ಬಂದ ಪ್ರಾಣವಾಯು : ಉಳಿದವು 500 ಜೀವ…

ದೆಹಲಿ : ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿದೆ. ಕೋವಿಡ್ ತುರ್ತುಪರಿಸ್ಥಿತಿಯಲ್ಲಿ ಪ್ರಾಣವಾಯುವಿಗೆ ಬೇಡಿಕೆ ಹೆಚ್ಚಿದೆ. ಆಕ್ಸಿಜನ್ ಸಿಗದೆ ಆಸ್ಪತ್ರೆಯಲ್ಲಿದ್ದರು ಪ್ರಾಣ ಪಕ್ಷಿ ಹಾರಿ ಹೋಗುತ್ತಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ನಿನ್ನೆ ಉಂಟಾದ ಆಮ್ಲಜನಕದ ಕೊರತೆ ಬಗ್ಗೆ ಟ್ವೀಟ್ ಮಾಡಿದ ಕೆಲ ಹೊತ್ತಿನಲ್ಲಿ ಜಿಟಿಬಿ ಆಸ್ಪತ್ರೆಗೆ ಆಕ್ಸಿಜನ್ ಟ್ಯಾಂಕರ್ ಬಂದು ತಲುಪಿದೆ.

ಇದರಿಂದ ಡೆಡ್ಲಿ ಸೋಂಕಿನಿಂದ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿದ್ದ 500 ಜೀವಗಳು ಉಳಿದಿವೆ. ಆಸ್ಪತ್ರೆಯಲ್ಲಿ ಸುಮಾರು 500 ರೋಗಿಗಳಿದ್ದು, ಮುಂಜಾನೆ 2 ಗಂಟೆವರೆಗೆ ಮಾತ್ರ ಸಾಕಾಗುಷ್ಟು ಆಕ್ಸಿಜನ್ ಇತ್ತು. ಒಂದೊಮ್ಮೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದಿದ್ರೆ ಸಾವಿನ ರಾಶಿ ಕಾಣುವ ಮಹಾ ದುರಂತವೊಂದು ಕೈ ತಪ್ಪಿದೆ.

2 ಗಂಟೆಗೆ ಆಕ್ಸಿಜನ್ ಖಾಲಿಯಾಗುವ ಮೊದಲೇ ಮಧ್ಯರಾತ್ರಿ ಸರಿಯಾಗಿ 1.30 ಕ್ಕೆ ಪ್ರಾಣ ವಾಯುಹೊತ್ತ ಟ್ರಕ್ ಜಿಟಿಬಿ ಆಸ್ಪತ್ರೆಗೆ ತಲುಪಿದೆ. ಜಿಟಿಬಿ ಆಸ್ಪತ್ರೆಗಳಷ್ಟೇ ಅಲ್ಲದೆ, ಬುಧವಾರ ಮುಂಜಾನೆ ಹೊತ್ತಿಗೆ ದೆಹಲಿಯ ಹಲವು ಪ್ರತಿಷ್ಠಿತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆ ಆಗಿದೆ. ಸಿಎಂ ಅರವಿಂದ್ ಕ್ರೇಜಿವಾಲ್ ಕಳೆದ ನಾಲ್ಕೈದು ದಿನಗಳಿಂದಲೂ ಆಕ್ಸಿಜನ್ ಕೊರತೆ ಬಗ್ಗೆ ಹೇಳುತ್ತಲೇ ಬಂದಿದ್ದರು ಕೇಂದ್ರ ಸರ್ಕಾರ ಕಿವಿಗೊಡದಿದ್ದಕ್ಕೆ ಅಸಮಾಧನ ಹೊರಹಾಕಿದ್ದಾರೆ.

ಮಧ್ಯಪ್ರದೇಶ: ಆಸ್ಪತ್ರೆಗೆ ಅಮ್ಲಜನಕ ಹೊತ್ತ ಟ್ರಕ್ ಬರುತ್ತಿದ್ದಂತೆ ಸಿಲಿಂಡರ್’ಗಳ ದರೋಡೆ