ದೆಹಲಿಯಲ್ಲಿ ಆಕ್ಸಿಜನ್ ಗಾಗಿ ಹಾಹಾಕಾರ : 24 ಗಂಟೆಯಲ್ಲಿ 25 ರೋಗಿಗಳು ಸಾವು.. ಆಕ್ಸಿಜನ್ ಬೇಕಿದೆ ಎಂದ ಅಧಿಕಾರಿ - BC Suddi
ದೆಹಲಿಯಲ್ಲಿ ಆಕ್ಸಿಜನ್ ಗಾಗಿ ಹಾಹಾಕಾರ : 24 ಗಂಟೆಯಲ್ಲಿ 25 ರೋಗಿಗಳು ಸಾವು.. ಆಕ್ಸಿಜನ್ ಬೇಕಿದೆ ಎಂದ ಅಧಿಕಾರಿ

ದೆಹಲಿಯಲ್ಲಿ ಆಕ್ಸಿಜನ್ ಗಾಗಿ ಹಾಹಾಕಾರ : 24 ಗಂಟೆಯಲ್ಲಿ 25 ರೋಗಿಗಳು ಸಾವು.. ಆಕ್ಸಿಜನ್ ಬೇಕಿದೆ ಎಂದ ಅಧಿಕಾರಿ

ದೆಹಲಿ : ಕೊರೊನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಗಾಗಿ ಹಾಹಾಕಾರ ಶುರುವಾಗಿದೆ. ದೆಹಲಿಯ ಶ್ರೀಗಂಗಾ ರಾಮ್ ಆಸ್ಪತ್ರೆಯಲ್ಲಿ ಪ್ರಾಣವಾಯುವಿಲ್ಲದೆ 25 ರೋಗಿಗಳು ಕೊನೆಯುಸಿರೆಳೆದಿದ್ದಾರೆ. ಕೇವಲ 24 ಗಂಟೆಗಳಲ್ಲಿ ಆಕ್ಸಿಜನ್ ಕೊರತೆಯಿಂದ 25 ಮಂದಿ ಪ್ರಾಣಬಿಟ್ಟಿದ್ದು, ಇನ್ನು 60 ಮಂದಿ ಅಪಾಯದಲ್ಲಿದ್ದಾರೆ. ಶೀಘ್ರ ಆಕ್ಸಿಜನ್ ಪೂರೈಕೆಯಾಗದಿದ್ರೆ ಈ 60 ಜನರ ಪ್ರಾಣ ಹೋಗುವುದು ಗ್ಯಾರಂಟಿ ಎಂದು ಆಸ್ಪತ್ರೆ ನಿರ್ದೇಶಕರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ತುರ್ತಾಗಿ ವೈದ್ಯಕೀಯ ಆಮ್ಲಜನಕ ಬೇಕು ಎಂದು ಮನವಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿಯ ವೈದ್ಯರು ರೋಗಿಗಳಿಗೆ ಆಮ್ಲಜನಕ ಪೂರೈಸಲು ಹರಸಾಹಸ ಪಡುತ್ತಿರುವುದು ನಿಜಕ್ಕೂ ಕರುಣಾಜನಕವಾಗಿದೆ.

ಜಾಗತಿಕ ದಾಖಲೆ- ಒಂದೇ ದಿನ 3.32 ಲಕ್ಷ ಕೊರೊನಾ ಪ್ರಕರಣ ಪತ್ತೆ