ಬೆಳಗಾವಿ : ಸಂಸದ ದಿ. ಸುರೇಶ್ ಅಂಗಡಿ ಮಡದಿ ಮಂಗಳಾಗೆ ಕೊರೊನಾ ದೃಢ - BC Suddi
ಬೆಳಗಾವಿ : ಸಂಸದ ದಿ. ಸುರೇಶ್ ಅಂಗಡಿ ಮಡದಿ ಮಂಗಳಾಗೆ ಕೊರೊನಾ ದೃಢ

ಬೆಳಗಾವಿ : ಸಂಸದ ದಿ. ಸುರೇಶ್ ಅಂಗಡಿ ಮಡದಿ ಮಂಗಳಾಗೆ ಕೊರೊನಾ ದೃಢ

ಬೆಳಗಾವಿ : ಸಂಸದ ದಿ. ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಗೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋವಿಡ್ ತಪಾಸಣೆಗೆ ಒಳಪಟ್ಟ ವೇಳೆ ವರದಿ ಪಾಸಿಟಿವ್ ಬಂದಿರುತ್ತದೆ. ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲವಾದರೂ, ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರೈಂಟೈನ್ ನಲ್ಲಿದ್ದಾರೆ.

ಬಿಜೆಪಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿರುವ ಮಂಗಳಾ ಅವರು ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಸಕ್ರೀಯವಾಗಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಚುನಾವಣೆಯು ನಡೆದಿದ್ದು ಎಲ್ಲರ ಚಿತ್ತ ಫಲಿತಾಂಶದ ಮೇಲೆ ನೆಟ್ಟಿದೆ.

ಈ ನಡುವೆ ಮಂಗಳಾ ಅವರಿಗೆ ಕೊರೊನಾ ಸೋಂಕು ಅಂಟಿಕೊಂಡಿರುವುದಕ್ಕೆ ಪಕ್ಷದ ಮುಖಂಡರು ಪ್ರಜೆಗಳು ಶೀಘ್ರ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನು ಸೋಂಕಿನಿಂದ ಮನೆಯಲ್ಲಿಯೇ ಇರುವ ಮಂಗಳಾ ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ವೈದ್ಯರ ಸಲಹೆ ಪಡೆಯುವಂತೆ ವಿನಂತಿಸಿಕೊಂಡಿದ್ದಾರೆ.

ಬೆಂಗಳೂರು : ಲಾಕ್‌ಡೌನ್‌ ಇದ್ದರೂ ಲಸಿಕೆ ಅಭಿಯಾನ ಮುಂದುವರೆಯಲಿದೆ : ಸಚಿವ ಸುಧಾಕರ್‌