ಆರು ತಿಂಗಳ ಮಗುವನ್ನು ರಕ್ಷಿಸಲೆಂದು ಮಹಡಿ ಮೇಲಿಂದ ಹಾರಿದ್ದ ತಾಯಿ ಸಾವು - BC Suddi
ಆರು ತಿಂಗಳ ಮಗುವನ್ನು ರಕ್ಷಿಸಲೆಂದು ಮಹಡಿ ಮೇಲಿಂದ ಹಾರಿದ್ದ ತಾಯಿ ಸಾವು

ಆರು ತಿಂಗಳ ಮಗುವನ್ನು ರಕ್ಷಿಸಲೆಂದು ಮಹಡಿ ಮೇಲಿಂದ ಹಾರಿದ್ದ ತಾಯಿ ಸಾವು

ತಿರುವನಂತಪುರ: ಟೆರೇಸ್ ಮೇಲಿಂದ ಬೀಳುತ್ತಿದ್ದ ತನ್ನ ಆರು ತಿಂಗಳ ಮಗುವನ್ನು ರಕ್ಷಿಸಲು ಹೋಗಿ ತಾನೇ ಮೂರು ಮಹಡಿ ಕಟ್ಟಡದಿಂದ ಬಿದ್ದು 25 ವರ್ಷದ ಮಹಿಳೆಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ದುಬೈ ನಲ್ಲಿ ಕೆಲಸ ಮಾಡುತ್ತಿರುವ ಅಬು ಫಜಲ್ ಎಂಬಾತನ ಪತ್ನಿ ನೀಮಾ ಎಂದು ಗುರುತಿಸಲಾಗಿದೆ.

ಗುರುವಾರ ಬೆಳಿಗ್ಗೆ 10.30 ರ ಸುಮಾರಿಗೆ ತಿರುವನಂತಪುರಂನ ಎಡವಾದಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಬಳಿಯ ನೂಲ್ ಜಲಾಲ್ ರೆಸಿಡೆನ್ಸಿಯ ಮೂರು ಅಂತಸ್ತಿನ ಫ್ಲ್ಯಾಟ್‌ನಲ್ಲಿ ಈ ಘಟನೆ ನಡೆದಿದೆ. ನೀಮಾ ತನ್ನ ಆರು ತಿಂಗಳ ಮಗು ನಿಫಾ ಜೊತೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಆಟವಾಡಲು ಟೆರೇಸ್ ಮೇಲೆ ಹೋಗಿದ್ದಾರೆ. ಆದರೆ ಮಗು ಆಕೆಯ ಕೈಯಿಂದ ಜಾರಿ ಗ್ರಿಲ್ ಮೂಲಕ ಕೆಳಗೆ ಬಿದ್ದಿತು. ಗಾಬರಿಗೊಂಡ ನೀಮಾ ಕೂಡ ಮಗುವನ್ನು ಉಳಿಸುವ ಪ್ರಯತ್ನದಲ್ಲಿ ಟೆರೇಸ್‌ನಿಂದ ಹಾರಿದ್ದಾರೆ. ಆದರೆ ಕೆಳಗೆ ಬಿದ್ದ ನೀಮಾ ತಲೆಗೆ ತೀವ್ರವಾದ ಗಾಯಗಳಾಗಿದೆ. ಘಟನೆಯ ಸಮಯದಲ್ಲಿ ನಿಮಾ ಅವರ ತಾಯಿ ಮತ್ತು ಸಹೋದರಿ ಸುಲ್ತಾನಾ ಕೂಡ ಫ್ಲ್ಯಾಟ್‌ನಲ್ಲಿದ್ದರು.

ಆದರೆ ಆರು ತಿಂಗಳ ಮಗು ನಿಫಾ ಅದೃಷ್ಟವಶಾತ್ ನೆಲದ ಮೇಲೆ ಬೇಡವೆಂದು ರಾಶಿ ಹಾಕಿದ್ದ ಬಟ್ಟೆ ಮತ್ತು ಥರ್ಮೋಕಾಲ್ ಮೇಲೆ ಬಿದ್ದ ಪರಿಣಾಮ ಸಣ್ಣ ಪುಟ್ಟ ಗಾಯಗಳೊಂದಿಗೆ ಪರಾಗಿದೆ. ಆದರೆ , ತಲೆಗೆ ಪೆಟ್ಟು ಬಿದ್ದ ಕಾರಣ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ನೀಡುವ ವೇಳೆಯೇ ಆಕೆ ಸಾವನ್ನಪ್ಪಿದ್ದಾರೆ. ಆಕೆಯ ತಲೆ ಬುರುಡೆ ಆರು ಕಡೆ ಗಾಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ

error: Content is protected !!