ಕೋವಿಡ್ ಗೆ ಉ. ಪ್ರದೇಶದ ಸಚಿವ ನಿಧನ - BC Suddi
ಕೋವಿಡ್ ಗೆ ಉ. ಪ್ರದೇಶದ ಸಚಿವ ನಿಧನ

ಕೋವಿಡ್ ಗೆ ಉ. ಪ್ರದೇಶದ ಸಚಿವ ನಿಧನ

ಉತ್ತರ ಪ್ರದೇಶ : ಡೆಡ್ಲಿ ಸೋಂಕಿಗೆ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಸೋಂಕಿಗೆ ಇಂದು ಮತ್ತೋರ್ವ ರಾಜಕೀಯ ನಾಯಕ ಕೊನೆಯುಸಿರೆಳೆದಿದ್ದಾರೆ.

ಹೌದು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಸಚಿವ ಹನುಮಾನ್ ಮಿಶ್ರಾ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇವರು ಕೋವಿಡ್ ವೈರಸ್ ತಗುಲಿದ್ದರಿಂದ ಲಕ್ನೋನ ಸಂಜಯ್ ಗಾಂಧಿ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಸಂಖ್ಯೆ ಗಳ ಏರಿಕೆಯಲ್ಲಿ ಮಹಾರಾಷ್ಟ್ರ ನಂತರ ಸ್ಥಾನ ಉತ್ತರ ಪ್ರದೇಶ ಪಡೆದುಕೊಂಡಿದೆ.

ಉತ್ತರ ಪ್ರದೇಶ ಲಾಕ್ : ತಡೆ ನೀಡಿದ ಸುಪ್ರೀಂ