ಪುಟ್ಟ ಬಾಲಕನನ್ನು ವಿಮಾನ ಹತ್ತಿಸಿದ ರಾಹುಲ್ ಗಾಂಧಿ  - BC Suddi
ಪುಟ್ಟ ಬಾಲಕನನ್ನು ವಿಮಾನ ಹತ್ತಿಸಿದ ರಾಹುಲ್ ಗಾಂಧಿ 

ಪುಟ್ಟ ಬಾಲಕನನ್ನು ವಿಮಾನ ಹತ್ತಿಸಿದ ರಾಹುಲ್ ಗಾಂಧಿ 

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯವರು ಪುಟ್ಟ ಬಾಲಕನೊಂದಿಗೆ ವಿಮಾನದ ಕಾಕ್‌ಪಿಟ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ವಿಡಿಯೋಗೆ ಮೆಚ್ಚುಗೆ ಹರಿದುಬರುತ್ತಿದೆ. ರಾಹುಲ್ ಗಾಂಧಿ ಕೇರಳಗೆ ಭೇಟಿ ನೀಡಿದ್ದ ಸಂದರ್ಭ ಓರ್ವ ಬಾಲಕನಲ್ಲಿ ನೀನು ಮುಂದೆ ಏನಾಗುತ್ತೀಯ ಎಂದು ಪ್ರಶ್ನಿಸಿದ್ದು, ತನಗೆ ಪೈಲಟ್ ಆಗಬೇಕು ಎಂದು ಆಸೆಯಿರುವುದಾಗಿ ಬಾಲಕ ಪಟ್ಟನೆ ಉತ್ತರಿಸಿದ್ದಾನೆ.

“ನನಗೆ ಹಾರಲು ಇಷ್ಟ. ಅದಕ್ಕೇ ನಾನು ಪೈಲಟ್ ಆಗಲು ಬಯಸಿದ್ದೇನೆ” ಎಂದು ಹೇಳಿದ್ದಾನೆ. ಕಣ್ಣೂರಿನ ಬಾಲಕ ಅದ್ವೈತ್(9) ಅವನ ಆಸೆ ಕೇಳಿದ ನಂತರ ಮರುದಿನವೇ ವಿಮಾನದ ಕಾಕ್‌ಪಿಟ್‌ಗೆ ಬಾಲಕನನ್ನು ಕರೆದುಕೊಂಡು ಹೋಗಲು ಸಿದ್ಧತೆ ಮಾಡಿದ್ದ ರಾಹುಲ್, ಬಾಲಕನನ್ನು ವಿಮಾನದ ಒಳಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕನೊಂದಿಗೆ ಪೈಲಟ್ ಹಾಗೂ ರಾಹುಲ್ ಗಾಂಧಿಯವರು ಕೆಲ ಕಾಲ ಮಾತಾಡುತ್ತಾ ವಿಮಾನದ ಬಗ್ಗೆ ವಿವರಣೆ ನೀಡಿದ್ದಾರೆ.

ಇನ್ನು ಈ ವಿಡಿಯೋವನ್ನು ರಾಹುಲ್ ಗಾಂಧಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ಯಾವ ಕನಸೂ ದೊಡ್ಡದಲ್ಲ. ಅದ್ವೈತ್ ಕನಸನ್ನು ನಿಜಗೊಳಿಸುವ ಮೊದಲ ಹೆಜ್ಜೆ ಇದಾಗಿದ್ದು, ಆತ ಹಾರಲು ನೆರವಾಗುವ ಪ್ರತಿ ಅವಕಾಶವನ್ನು ನೀಡುವಂತೆ ಸಮಾಜವನ್ನು ಸೃಷ್ಟಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ” ಎಂದು ಬರೆದುಕೊಂಡಿದ್ದಾರೆ.

 

ದೇವರ ದಯೆ ಎಲ್ಲರ ಮೇಲಿರಲಿ: ದೇವೇಗೌಡ

error: Content is protected !!