ಚುನಾವಣಾ ತಂತ್ರಜ್ಞನ ಕೆಲಸವನ್ನು ತ್ಯಜಿಸುವುದಾಗಿ ಘೋಷಿಸಿದ ಪ್ರಶಾಂತ್‌ ಕಿಶೋರ್‌ - BC Suddi
ಚುನಾವಣಾ ತಂತ್ರಜ್ಞನ ಕೆಲಸವನ್ನು ತ್ಯಜಿಸುವುದಾಗಿ ಘೋಷಿಸಿದ ಪ್ರಶಾಂತ್‌ ಕಿಶೋರ್‌

ಚುನಾವಣಾ ತಂತ್ರಜ್ಞನ ಕೆಲಸವನ್ನು ತ್ಯಜಿಸುವುದಾಗಿ ಘೋಷಿಸಿದ ಪ್ರಶಾಂತ್‌ ಕಿಶೋರ್‌

ಕೋಲ್ಕತ್ತಾ: ಚುನಾವಣಾ ರಣತಂತ್ರಣ ಪರಿಣಿತನಾಗಿರುವ ಹಾಗೂ ಎಲ್ಲಾ ವಿರೋಧದ ನಡುವೆ ಮೂರನೇ ಬಾರಿಗೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಸಿಎಂ ಕುರ್ಚಿಯೇರಲು ಸಹಕರಿಸಿದ್ದ ಪ್ರಶಾಂತ್‌ ಕಿಶೋರ್‌‌‌‌ ಚುನಾವಣಾ ತಂತ್ರಜ್ಞನ ಕೆಲಸವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನಾನು ಚುನಾವಣಾ ತಂತ್ರಜ್ಞ ಕೆಲಸವನ್ನು 8-9 ವರ್ಷಗಳಿಂದ ಮಾಡುತ್ತಿದ್ದು, ಸಾಕಷ್ಟು ನೋಡಿದ್ದೇನೆ. ನಾನು ಇನ್ನೂ ಇದನ್ನು ಮುಂದುವರಿಸುವ ಅಗತ್ಯವಿಲ್ಲ. ಈ ಜವಾಬ್ದಾರಿಯಿಂದ ನಾನು ದೂರವಾಗುತ್ತೇನೆ ಸದ್ಯ ನಾನು ಇದರಿಂದ ವಿರಾಮ ತೆಗೆದುಕೊಂಡು ಬೇರೇನಾದರೂ ಮಾಡಲು ಇಚ್ಛಿಸುತ್ತೇನೆ” ಎಂದಿದ್ದಾರೆ.

“ಎಂದಿಗಿಂತಲೂ ನಾನು ಸಾಕಷ್ಟು ವಿಶ್ವಾಸ ಹೊಂದಿದ್ದೇನೆ. ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬೃಹತ್‌ ಪ್ರಚಾರ ನಡೆದಿತ್ತು. ಆದರೆ, ನಾವೂ ಕೂಡಾ ತೀವ್ರ ಸ್ಪರ್ಧೆ ನೀಡಿದ್ದೆವು” ಎಂದು ಹೇಳಿದ್ದಾರೆ.

ಕೊರೊನಾ ಪ್ರಕರಣ : ಕೊರೊನಾ ಪರಿಸ್ಥಿತಿ ಎದುರಿಸಲು ಭಾರತದ ಮಾನವ ಸಂಪನ್ಮೂಲ ಸ್ಥಿತಿಗತಿ ಕುರಿತು ಮೋದಿ ಸಭೆ