ಕೋಲ್ಕತ್ತಾ: ನಾಲ್ಕು ಹಂತದ ಚುನಾವಣೆ ಒಂದೇ ದಿನ ನಡೆಸಲು ಸಿಎಂ ಮಮತಾ ಬ್ಯಾನರ್ಜಿ ಒತ್ತಾಯ..! - BC Suddi
ಕೋಲ್ಕತ್ತಾ: ನಾಲ್ಕು ಹಂತದ ಚುನಾವಣೆ ಒಂದೇ ದಿನ ನಡೆಸಲು ಸಿಎಂ ಮಮತಾ ಬ್ಯಾನರ್ಜಿ ಒತ್ತಾಯ..!

ಕೋಲ್ಕತ್ತಾ: ನಾಲ್ಕು ಹಂತದ ಚುನಾವಣೆ ಒಂದೇ ದಿನ ನಡೆಸಲು ಸಿಎಂ ಮಮತಾ ಬ್ಯಾನರ್ಜಿ ಒತ್ತಾಯ..!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಉಳಿದಿರುವ ನಾಲ್ಕು ಹಂತಗಳಿಗೆ ಒಂದೇ ದಿನ ಚುನಾವಣೆ ನಡೆಸಲು ಸಿಎಂ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಳವಾಗುತ್ತಿದೆ. ಇನ್ನೂ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲು ಬಾಕಿ ಉಳಿದಿದೆ. ಇವುಗಳನ್ನು ಪ್ರತ್ಯೇಕವಾಗಿ ನಡೆಸುವ ಬದಲು ಒಂದೇ ಸಮಯದಲ್ಲಿ ಮುಗಿಸಬೇಕು. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಹಂತಗಳಿಗೆ ಚುನಾವಣೆ ನಡೆಯುತ್ತಿದೆ. ಮೊದಲ ನಾಲ್ಕು ಹಂತಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದ ನಾಲ್ಕು ಹಂತದ ಚುನಾವಣೆಗಳಿಗೆ ಒಂದೇ ಸಲ ಮತದಾನ ನಡೆಸಲು ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ 14,738 ಕೊರೋನಾ ಪ್ರಕರಣಗಳು ಪತ್ತೆ