'ಲಸಿಕೆ ಮಾತ್ರವಲ್ಲ E =mc² ಸೂತ್ರ ಕಂಡು ಹಿಡಿದಿದ್ದು ಪ್ರಧಾನಿ ಮೋದಿಯೇ?' - ಕಾಂಗ್ರೆಸ್ ವ್ಯಂಗ್ಯ - BC Suddi
‘ಲಸಿಕೆ ಮಾತ್ರವಲ್ಲ E =mc² ಸೂತ್ರ ಕಂಡು ಹಿಡಿದಿದ್ದು ಪ್ರಧಾನಿ ಮೋದಿಯೇ?’ – ಕಾಂಗ್ರೆಸ್ ವ್ಯಂಗ್ಯ

‘ಲಸಿಕೆ ಮಾತ್ರವಲ್ಲ E =mc² ಸೂತ್ರ ಕಂಡು ಹಿಡಿದಿದ್ದು ಪ್ರಧಾನಿ ಮೋದಿಯೇ?’ – ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು:  ಬಿಜೆಪಿ ಕಾಂಗ್ರೆಸ್ ನ ಟ್ವೀಟ್ ವಾರ್ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಕೊರೊನಾದ ಕಡೆಗೆ ತಿರುಗಿದೆ. “ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ನಿರ್ವಹಣೆ ಹಾಗೂ ನಿಯಂತ್ರಣದ ನೆಪದಲ್ಲಿ ಸಾವಿರಾರು ಕೋಟಿಗೂ ಅಧಿಕ ಹಣ ಲೂಟಿ ಮಾಡಿದ್ದು, ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವೆಂಬ ವೈರಸ್ ಗೆ ಲಸಿಕೆ ಎಲ್ಲಿದೆ ತರುವುದು ಎಂಬ ಸಿದ್ದರಾಮಯ್ಯ ಟ್ವೀಟ್ ಗೆ ಬಿಜೆಪಿಯೂ ಸಿದ್ದರಾಮಯ್ಯ ಸದನದಲ್ಲಿ ನಿದ್ರಿಸಿದರೆ ಲೆಕ್ಕ ಕೊಟ್ಟಿದ್ದು ತಿಳಿಯುವುದು ಹೇಗೆ ಎಂದು ಟಾಂಗ್ ಕೊಟ್ಟಿದೆ.

ಮಾತ್ರವಲ್ಲದೆ ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯೂ, ಮೋದಿ ಸರ್ಕಾರ ಲಸಿಕೆ ಕಂಡುಹಿಡಿದು 70 ಕ್ಕೂ ಅಧಿಕ ದೇಶಗಳಿಗೆ ಲಸಿಕೆ ನೀಡಿದೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರ ಕೊಳಕು ಮನಸ್ಥಿತಿಗೆ ಲಸಿಕೆ ಶೋಧಿಸಲು ಸಾಧ್ಯವಿಲ್ಲ. 6 ದಶಕದಿಂದ ದೇಶದಲ್ಲಿ ಕಾಂಗ್ರೆಸ್ ನಡೆಸಿದ ಲೂಟಿಯ ಲೆಕ್ಕ ಕೇಳುವ ಧೈರ್ಯ ತೋರುವಿರಾ ಸಿದ್ದರಾಮಯ್ಯ?ಲೆಕ್ಕ ಕೇಳುವುದಕ್ಕೆ ಗಾಂಧಿ ಕುಟುಂಬದ ಭಯವೇ? ಎಂದು ಸಿದ್ದರಾಮಯ್ಯ ಟ್ವೀಟ್ ಗೆ ಪ್ರತ್ಯುತ್ತರ ನೀಡಿದೆ.

ಇದಕ್ಕೆ ಕಾಂಗ್ರೆಸ್ “ಯಾರದ್ದೋ ಕೂಸಿಗೆ, ಇನ್ಯಾರದ್ದೋ ಹೆಸರಿಡುವುದೇ ಬಿಜೆಪಿ ಜಾಯಮಾನ! ಕಾಂಗ್ರೆಸ್ ಸಾಧನೆಗಳ ಹೆಸರು ಬದಲಿಸಿ ತಮ್ಮದೆಂದು ಬಿಂಬಿಸಿದ್ದಲ್ಲದೆ ಈಗ ಖಾಸಗಿ ಕಂಪೆನಿಗಳು ತಯಾರಿಸಿದ ಲಸಿಕೆಗಳನ್ನೂ ನಾವೇ ಕಂಡು ಹಿಡಿದ್ದೇವೆ ಎನ್ನುತ್ತಿದೆ ಬಿಜೆಪಿ. ಅಂದಹಾಗೆ E =mc² ಸೂತ್ರವನ್ನೂ ಪ್ರಧಾನಿ ನರೇಂದ್ರ ಮೋದಿಯವರೇ ಕಂಡುಹಿಡಿದರೆ ಇದಕ್ಕೆ ಬಿಜೆಪಿ ಉತ್ತರಿಸಬೇಕು ಎಂದು ವ್ಯಂಗ್ಯವಾಡಿದೆ.

E =mc² ಇದು ಆಲ್ಬರ್ಟ್ ಐನ್‌ಸ್ಟೈನ್‌ ಕಂಡು ಹಿಡಿದ ಪ್ರಸಿದ್ಧ ಸೂತ್ರವಾಗಿದೆ.

error: Content is protected !!