ಆನೇಕಲ್: ಗೃಹಪ್ರವೇಶದ ಸಂಭ್ರಮಕ್ಕೆ ಕರೆಂಟ್ ಶಾಕ್- ನಾಲ್ವರು ಸಾವು - BC Suddi
ಆನೇಕಲ್: ಗೃಹಪ್ರವೇಶದ ಸಂಭ್ರಮಕ್ಕೆ ಕರೆಂಟ್ ಶಾಕ್- ನಾಲ್ವರು ಸಾವು

ಆನೇಕಲ್: ಗೃಹಪ್ರವೇಶದ ಸಂಭ್ರಮಕ್ಕೆ ಕರೆಂಟ್ ಶಾಕ್- ನಾಲ್ವರು ಸಾವು

ಆನೇಕಲ್: ಗೃಹ ಪ್ರವೇಶಕ್ಕಾಗಿ ಲೈಟಿಂಗ್ ಅಳವಡಿಸುತ್ತಿದ್ದ ನಾಲ್ವರಿಗೆ ವಿದ್ಯುತ್‌ ತಗುಲಿ ಸಾವನ್ನಪ್ಪಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯ ಇಂಡ್ಳಬೆಲೆಯಲ್ಲಿ ಇಂದು ನಡೆದಿದೆ.

ಇಂದು ಸಂಜೆ 7 ಕ್ಕೆ ಪರೀಕ್ಷಾ ಪೇ ಚರ್ಚಾ ಸಂವಾದ : ವರ್ಚುವಲ್ ಕಾರ್ಯಮಕ್ಕೆ ಹೆಚ್ಚಿದ ಉತ್ಸಾಹ..

ಆಕಾಶ್ (30), ಮಹಾದೇವ್ (35), ವಿಷಕಂಠ (35) ಮತ್ತು ವಿಜಯ್(30) ಮೃತ ದುರ್ದೈವಿಗಳು. ಇಂಡ್ಳಬೆಲೆಯ ಅಪಾರ್ಟ್‌ಮೆಂಟ್‌ನ ಉದ್ಘಾಟನೆ ನಾಳೆ ನಡೆಯಲಿತ್ತು. ಹೀಗಾಗಿ ಈ ನಾಲ್ವರೂ ಇಂದು ಅಪಾರ್ಟ್​ಮೆಂಟ್​ಗೆ ಲೈಟಿಂಗ್ಸ್‌ ಅಳವಡಿಸುತ್ತಿದ್ದರು. ಆದರೆ ವಿದ್ಯುತ್ ಕಂಬದಿಂದ ಕರೆಂಟ್ ಲೈನ್ ಎಳೆದುಕೊಂಡು ಟೆಸ್ಟ್ ಮಾಡುವಾಗ ವಿದ್ಯುತ್​ ಪ್ರವಹಿಸಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಮತ್ತು ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೃಹಪ್ರವೇಶದ ಸಂಭ್ರಮದಲ್ಲಿ ಜನರಿಗೆ ಘಟನೆಯಿಂದಾಗಿ ಬಿಗ್ ಶಾಕ್ ಎದುರಾಗಿದೆ.

error: Content is protected !!