ಬೆಳಗಾವಿ ಬ್ರೇಕಿಂಗ್: ಆಕ್ಸಿಜನ್ ಇಲ್ಲದೇ ನಾಲ್ವರ ಸಾವು - BC Suddi
ಬೆಳಗಾವಿ ಬ್ರೇಕಿಂಗ್: ಆಕ್ಸಿಜನ್ ಇಲ್ಲದೇ ನಾಲ್ವರ ಸಾವು

ಬೆಳಗಾವಿ ಬ್ರೇಕಿಂಗ್: ಆಕ್ಸಿಜನ್ ಇಲ್ಲದೇ ನಾಲ್ವರ ಸಾವು

ಬೆಳಗಾವಿ: ರಾಜ್ಯದಲ್ಲಿ ಆಕ್ಸಿಜನ್ ಅಭಾವದಿಂದ ಸಾವುಗಳ ಸಂಖ್ಯೆ ಏರುತ್ತಲೇ ಇದೆ. ಈಗ ಮತ್ತೆ ಬೆಳಗಾವಿಯಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು‌ ನಿನ್ನೆ ಮಂಗಳವಾರವಷ್ಟೇ ಮೂವರು ಮೃತಪಟ್ಟಿದ್ದರು‌. ಇನ್ನೋರ್ವ ವೃದ್ಧ ರೋಗಿಗೆ ತೀವ್ರ ಉಸಿರಾಟದ ತೊಂದರೆ ಇದ್ದರೂ ಸಕಾಲಕ್ಕೆ ಬೆಡ್ ಹಾಗೂ ವೆಂಟಿಲೇಟರ್ ಸಿಗದ ಕಾರಣ ಪುತ್ರಿಯ ಎದುರಲ್ಲೇ ಜೀವ ಬಿಟ್ಟಿದ್ದಾರೆ.