ದೇಶದ ಪ್ರಧಾನ ನಾಯಕ ತೆಗೆದುಕೊಳ್ಳುವ ನಿರ್ಧಾರಕ್ಕೆ, ಅವರು ಹೋಗುವ ದಾರಿಗೆ ನಾವೂ ಬದ್ಧರಾಗಿಬೇಕು : ಸಂಜಯ್ ರಾವತ್ - BC Suddi
ದೇಶದ ಪ್ರಧಾನ ನಾಯಕ ತೆಗೆದುಕೊಳ್ಳುವ ನಿರ್ಧಾರಕ್ಕೆ, ಅವರು ಹೋಗುವ ದಾರಿಗೆ ನಾವೂ ಬದ್ಧರಾಗಿಬೇಕು : ಸಂಜಯ್ ರಾವತ್

ದೇಶದ ಪ್ರಧಾನ ನಾಯಕ ತೆಗೆದುಕೊಳ್ಳುವ ನಿರ್ಧಾರಕ್ಕೆ, ಅವರು ಹೋಗುವ ದಾರಿಗೆ ನಾವೂ ಬದ್ಧರಾಗಿಬೇಕು : ಸಂಜಯ್ ರಾವತ್

ಮುಂಬೈ: ಕೋವಿಡ್ ಗಂಡಾಂತರದ ಈ ವೇಳೆಯಲ್ಲಿ ನಾವೆಲ್ಲ ಪ್ರಧಾನಿ ಮೋದಿಯವರೊಂದಿಗೆ ನಿಲ್ಲಬೇಕಿದೆ. ನಾವೆಲ್ಲ ನಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಅವರೊಂದಿಗೆ ಕೈ ಜೋಡಿಸಬೇಕಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಈ ಮೂಲಕ ಮೋದಿಗೆ ಬೆಂಬಲಿಸಿ ಮಾತಾಡಿದ್ದಾರೆ.

ನಮ್ಮ ದೇಶದ ಪ್ರಧಾನ ನಾಯಕನಿಗಾಗಲಿ, ಸರ್ಕಾರಕ್ಕೇ ಆಗಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಆಗುತ್ತಿದ್ದರೆ ನಾವು ಸುಮ್ಮನೆ ಕುಳಿತುಕೊಳ್ಳಬಾರದು. ನಮ್ಮನಮ್ಮೊಳಿಗೆ ಭಿನ್ನಾಭಿಪ್ರಾಯ ಮರೆತು ಒಟ್ಟಾಗಬೇಕು. ನಮ್ಮ ದೇಶದ ಕೊರೊನಾ ಪರಿಸ್ಥಿತಿಯನ್ನು ಹೇಗೆ ಚಿತ್ರಿಸಲಾಗುತ್ತಿದೆ.. ತೋರಿಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದು ನಮ್ಮ ದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಇದು ಭಾರತವನ್ನು ಅಪಖ್ಯಾತಿಗೊಳಿಸುವ ಸಂಚು ಇರಬಹುದು. ಇಲ್ಲಿನ ಆರ್ಥಿಕತೆ ನಾಶ ಮಾಡುವ ಪಿತೂರಿಯೂ ಆಗಿರಬಹುದು. ಈ ಹೊತ್ತಲ್ಲಿ ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿಲ್ಲಬೇಕು. ದೇಶದ ಪ್ರಧಾನ ನಾಯಕ ತೆಗೆದುಕೊಳ್ಳುವ ನಿರ್ಧಾರಕ್ಕೆ, ಅವರು ಹೋಗುವ ದಾರಿಗೆ ನಾವೂ ಬದ್ಧರಾಗಿಬೇಕು ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಥಾಣೆ:  ಮುಂಬ್ರಾ ಪ್ರದೇಶದಲ್ಲಿನ ಪ್ರೈಮ್‌‌‌ ಕ್ರಿಟಿಕೇರ್‌‌ ಆಸ್ಪತ್ರೆಯಲ್ಲಿ ಅಗ್ನಿ ಅವಘಡ : 4 ಮಂದಿ ಮೃತ್ಯು