ನವದೆಹಲಿ: ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಲಸಿಕೆಯನ್ನು ಪ್ರತಿ ಡೋಸ್ ಗೆ 250 ರೂ.ಗೆ ನೀಡಲಾಗುವುದು ಎನ್ನಲಾಗಿದೆ. ಅಂದ ಹಾಗೇ ಸರಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಯನ್ನು ನೀಡಲಾಗುತ್ತಿದೆ, ಆದರೆ ಜನರು ಖಾಸಗಿ ಕೇಂದ್ರಗಳಲ್ಲಿ ಹಣ ಪಾವತಿಸಬೇಕಾಗುತ್ತದೆ. ಈ ಹಿಂದೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಆರೋಗ್ಯ ಇಲಾಖೆ ಈ ಮೊತ್ತವನ್ನು 3-4 ದಿನಗಳೊಳಗೆ ನಿರ್ಧರಿಸಲಿದೆ ಎಂದು ಹೇಳಿದ್ದರು.

ಶುಕ್ರವಾರ ಸಂಜೆ 6 ರವರೆಗೆ ತಾತ್ಕಾಲಿಕ ವರದಿಪ್ರಕಾರ, ಒಟ್ಟು 1,37,56,940 ಲಸಿಕೆ ಡೋಸ್ ಗಳನ್ನು 2,89,320 ಸೆಷನ್ ಗಳ ಮೂಲಕ ನೀಡಲಾಗಿದೆ ”ದೇಶಾದ್ಯಂತ 42ನೇ ದಿನವಾದ ಶುಕ್ರವಾರ ಸಂಜೆ 6 ಗಂಟೆಯವರೆಗೆ ಒಟ್ಟು 2,84,297 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಇದರಲ್ಲಿ 1,13,208 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ಯನ್ನು ಮತ್ತು 1,71,089 ಎಚ್ ಸಿಡಬ್ಲ್ಯೂಗಳು 2ನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.