ಕೊರೊನಾಗಿಂತ ಕೋಮು ವೈರಸ್ ಅಪಾಯಕಾರಿ: ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಟಾಂಗ್ - BC Suddi
ಕೊರೊನಾಗಿಂತ ಕೋಮು ವೈರಸ್ ಅಪಾಯಕಾರಿ: ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಟಾಂಗ್

ಕೊರೊನಾಗಿಂತ ಕೋಮು ವೈರಸ್ ಅಪಾಯಕಾರಿ: ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಟಾಂಗ್

ಬೆಂಗಳೂರು: ಬಿಬಿಎಂಪಿ ಕೋವಿಡ್ ವಾರ್ ರೂಮ್ ನಲ್ಲಿ ಒಂದೇ ಸಮುದಾಯದವರನ್ನು ನೇಮಕಗೊಳಿಸಲಾಗಿದೆ. ಈ ಎಲ್ಲ ಮಾಫಿಯಾವನ್ನ ಬಯಲಿಗೆಳೆದಿದ್ದ ಸಂಸದ ತೇಜಸ್ವಿ ಸೂರ್ಯ ಒಂದೇ ಸಮುದಾಯದವರನ್ನು ವಾರ್ ರೂಮ್ ಗೆ ನೇಮಕ ಮಾಡಿದ್ದನ್ನು ಪ್ರಶ್ನೆ ಮಾಡಿ ಸಂಬಂಧಿಸಿದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ಸಂಗತಿಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ. ಕೊರೊನಾ ರೋಗಕ್ಕೂ ಜಾತಿ ಧರ್ಮವನ್ನು ಯಾಕೆ ಎಳೆದು ತರ್ತೀರಿ? ಕೊರೊನಾ ವೈರಸ್ ಗಿಂತಲೂ ನಿಮ್ಮ ಮೆದುಳಲ್ಲಿರುವ ಕೋಮು ವೈರಸ್ ಅಪಾಯಕಾರಿ. ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಕಾಲೆಳೆದಿದ್ದಾರೆ‌.

ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ ನಡೆಸಬೇಕಾಗಿರುವುದು ಬಿಬಿಎಂಪಿ ಅಧಿಕಾರಿಗಳ ವಿರುದ್ಧವಲ್ಲ‌. ವಿಧಾನಸೌಧದಲ್ಲಿ ಕೂತಿರುವ ಸಿಎಂ, ಸಚಿವರುಗಳು ಶಾಸಕರು ಸಂಸದರ ವಿರುದ್ಧ. ಸಣ್ಣ ಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ‌.