ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಹೀನ ಮನಸ್ಥಿತಿ ಬಿಜೆಪಿ ಸರ್ಕಾರದ್ದು: ಕಾಂಗ್ರೆಸ್ - BC Suddi
ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಹೀನ ಮನಸ್ಥಿತಿ  ಬಿಜೆಪಿ ಸರ್ಕಾರದ್ದು: ಕಾಂಗ್ರೆಸ್

ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಹೀನ ಮನಸ್ಥಿತಿ ಬಿಜೆಪಿ ಸರ್ಕಾರದ್ದು: ಕಾಂಗ್ರೆಸ್

ಬೆಂಗಳೂರ: ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಹೀನ ಮನಸ್ಥಿತಿಯ ಬಿಜೆಪಿ ಸರ್ಕಾರದ್ದಾಗಿದ್ದು, .ತಜ್ಞರು ನೀಡಿದ ವರದಿಗಳನ್ನು ಬಹಿರಂಗಪಡಿಸು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಎಂದು ವಿಪಕ್ಷ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದೆ.

ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ದ ಹರಿಹಾಯ್ದಿದ್ದು, ” ಅಧಿಕೃತವಾಗಿ ಲಾಕ್‌ಡೌನ್ ಘೋಷಿಸದೆಯೇ ಲಾಕ್‌ಡೌನ್ ಸ್ಥಿತಿ ನಿರ್ಮಿಸುವ ಮೂಲಕ ಚಾಪೆಯ ಕೆಳಗೆ ನುಸುಳುವ ಕುತಂತ್ರ ಬುದ್ದಿ ತೋರುತ್ತಿದೆ ಸರ್ಕಾರ. ಸಿಎಂ ಯಡಿಯೂರಪ್ಪ ಅವರೇ, ಈ ಸಮಯದಲ್ಲಿ ಜನತೆಗೆ ನೆರವಿನ ಔದಾರ್ಯತೆ ತೋರಬೇಕೆ ಹೊರತು, ತಂತ್ರಗಾರಿಕೆಯನ್ನಲ್ಲ” ಎಂದಿದೆ.

ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿರುವ ಜನತೆಗೆ ನೆರವಿನ ಪ್ಯಾಕೇಜ್‌ನ್ನು ಕೂಡಲೇ ಬಿಡುಗಡೆಗೊಳಿಸಿ.ತಜ್ಞರು ನೀಡಿದ ವರದಿಗಳನ್ನು ಬಹಿರಂಗಪಡಿಸು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಸಿಎಂ ಯಡಿಯೂರಪ್ಪ ಅವರೇ, ಬಹಿರಂಗಪಡಿಸಿ ನೋಡೋಣ, ವರದಿಗಳನ್ನು ತಾವು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತಂದಿರುವಿರಿ, ವರದಿಯಲ್ಲಿನ ಯಾವ ಯಾವ ಅಂಶಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೀರಿ, ಜನತೆಗೆ ತಿಳಿಯಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಎಲ್ಲವನೂ ಮುಚ್ಚಿಟ್ಟು ಕಳ್ಳಾಟ ಆಡುವುದನ್ನ ಬಿಡಿ.ಬಂಗಾಳದಲ್ಲಿ ಸರ್ಕಾರ ಬಂದರೆ ಉಚಿತ ಲಸಿಕೆ ನೀಡುವ ಭರವಸೆ ನೀಡುತ್ತದೆ ಬಿಜೆಪಿ.ಕರ್ನಾಟಕದಲ್ಲಿ ಬಿಜೆಪಿಯದ್ದೇ ಸರ್ಕಾರವಿದೆ, ಆದರೂ ಉಚಿತ ಲಸಿಕೆಯ ಮಾತಿಲ್ಲ. ಹೆಣದಲ್ಲೂ ಹಣ ಮಾಡುವ, ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಹೀನ ಮನಸ್ಥಿತಿ ಬಿಜೆಪಿ ಎನ್ನುವಂತ ಮಾನಗೆಟ್ಟ ಪಕ್ಷಕ್ಕೆ ಮಾತ್ರ ಇರುವುದು ಎಂದು ಕಿಡಿ ಕಾರಿದೆ.

ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುವ ಭರವಸೆಯ ಮಾತುಗಳನ್ನಾಡಿ ₹35.000 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿರಿಸಿತ್ತು.ಆ ಹಣ ಎಲ್ಲಿ ಹೋಯ್ತು ನಿರ್ಮಲಾ ಸೀತಾರಾಮನ್ ಅವರೇ? ಆ ಭರವಸೆ ಎಲ್ಲಿ ಹೋಯ್ತುಪ್ರಧಾನಿ ನರೇಂದ್ರ ಮೋದಿಯವರೇ, ಮುಖ್ಯಮಂತ್ರಿಗಳೇ , ರಾಜ್ಯ ಸರ್ಕಾರ ಕೂಡಲೇ ಸರ್ವರಿಗೂ ಉಚಿತ ಲಸಿಕೆ ನೀಡುವ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದೆ.

ಕೊರೊನಾದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಕೋವಿಡ್ ಭೀಕರತೆ  ಅನುಭವಿಸಿದ್ದೇನೆ: ಕೊರೊನಾದಂತಹ ರೋಗ ನಮ್ಮ ವೈರಿಗಳಿಗೂ ಬರಬಾರದು: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್