ಕೈ ಮುಗಿದು ಮನವಿ ಮಾಡಿದ ಸಿಎಂ : ಕೊರೊನಾ ಕಂಟ್ರೋಲ್ ಆಗುತ್ತಿಲ್ಲ ಮನೆಯಲ್ಲಿಯೇ ಇರಿ ಎಂದು ಸೂಚನೆ - BC Suddi
ಕೈ ಮುಗಿದು ಮನವಿ ಮಾಡಿದ ಸಿಎಂ : ಕೊರೊನಾ ಕಂಟ್ರೋಲ್ ಆಗುತ್ತಿಲ್ಲ ಮನೆಯಲ್ಲಿಯೇ ಇರಿ ಎಂದು ಸೂಚನೆ

ಕೈ ಮುಗಿದು ಮನವಿ ಮಾಡಿದ ಸಿಎಂ : ಕೊರೊನಾ ಕಂಟ್ರೋಲ್ ಆಗುತ್ತಿಲ್ಲ ಮನೆಯಲ್ಲಿಯೇ ಇರಿ ಎಂದು ಸೂಚನೆ

ಬೆಂಗಳೂರು : ಕೊರೊನಾದಿಂದ ಆಸ್ಪತ್ರೆ ಪಾಲಾಗಿದ್ದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಸಿಎಂ ಆ.16ರಂದು ರೊಟೀನ್ ಚೆಕಪ್ಗಾಗಿ ರಾಮಯ್ಯ ಆಸ್ಪತ್ರೆಗೆ ತೆರಳಿದ್ದ ವೇಳೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಸದ್ಯ ಇಂದು ಮತ್ತೊಮ್ಮೆ ಕೊವೀಡ್ ಟೆಸ್ಟ್ ಮಾಡಲಾಗಿದ್ದು ವರದಿ ನೆಗೆಟಿವ್ ಬಂದಿದೆ. ಹಾಗಾಗಿ ಇಂದು ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗಿದ್ದಾರೆ. ಇನ್ನು ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ರಾಜ್ಯದ ಜನತೆಗೆ ಕೈಮುಗಿದ ಬಿಎಸ್ ವೈ ದಯವಿಟ್ಟು ಮನೆಯಿಂದ ಹೊರಬರಬೇಡಿ, ಅನಗತ್ಯವಾಗಿ ರಸ್ತೆಗೆ ಇಳಿಯಬೇಡಿ ಇದರಿಂದ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ನಾವು ಪರಿಸ್ಥಿತಿಯನ್ನು ನಿಯಂತ್ರಿಸಲಾಗದ ಹಂತ ತಲುಪಿದ್ದೇವೆ ಹಾಗಾಗಿ ಕೋವಿಡ್ ನಿಯಮ ಪಾಲಿಸಿ ಮನೆಯಲ್ಲಿಯೇ ಇರಿ ಎಂದಿದ್ದಾರೆ.

ಧರ್ಮಸ್ಥಳ: ಶ್ರೀ ಕ್ಷೇತ್ರದ ಸಾಮೂಹಿಕ ವಿವಾಹ ಕಾರ್ಯಕ್ರಮ ರದ್ದು; ನೋಂದಣಿದಾರರಿಗೆ ಪರ್ಯಾಯ ವ್ಯವಸ್ಥೆ