ಕಪ್ಪು ವರ್ಣೀಯ ಜಾರ್ಜ್ ಪ್ಲಾಯ್ಡ್ ಪ್ರಕರಣ - ಪೊಲೀಸ್ ಅಧಿಕಾರಿ ಡೆರಿಕ್ ಅಪರಾಧಿ ಎಂದ ಕೋರ್ಟ್ - BC Suddi
ಕಪ್ಪು ವರ್ಣೀಯ ಜಾರ್ಜ್ ಪ್ಲಾಯ್ಡ್ ಪ್ರಕರಣ – ಪೊಲೀಸ್ ಅಧಿಕಾರಿ ಡೆರಿಕ್ ಅಪರಾಧಿ ಎಂದ ಕೋರ್ಟ್

ಕಪ್ಪು ವರ್ಣೀಯ ಜಾರ್ಜ್ ಪ್ಲಾಯ್ಡ್ ಪ್ರಕರಣ – ಪೊಲೀಸ್ ಅಧಿಕಾರಿ ಡೆರಿಕ್ ಅಪರಾಧಿ ಎಂದ ಕೋರ್ಟ್

ಅಮೆರಿಕಾ: ಅಮೆರೀಕಾದಲ್ಲಿ ಪೊಲೀಸರ ವಶದಲ್ಲಿದ್ದಾಗಲೇ ಸಾವೀಗೀಡಾಗಿದ್ದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಪ್ಲಾಯ್ಡ್ ಪ್ರಕರಣದಲ್ಲಿ ಬಿಳಿ ವರ್ಣೀಯ ಪೊಲೀಸ್ ಅಧಿಕಾರಿ ಡೆರಿಕ್ ಚೌವೀನ್ ತಪ್ಪಿತಸ್ಥ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.

ಕಳೆದ ವರ್ಷದ ಮೇ 25ರಂದು ಫ್ಲಾಯ್ಡ್ ಸಾವೀಗೀಡಾಗುವ ಮೊದಲು ಅವರ ಕತ್ತನ್ನು ಪೊಲೀಸ್ ಅಧಿಕಾರಿ ಡೆರಿಕ್ ಚೌವೀನ್ ಸುಮಾರು 9 ನಿಮಿಷ ಮೊಣಕಾಲಿನಿಂದ ಒತ್ತಿ ಹಿಡಿದಿದ್ದರು. ಈ ಪ್ರಕರಣ ಅಮೇರಿಕಾದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೆ ಜನಾಂಗೀಯ ಭೇದದ ಕುರಿತು ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಫ್ಲಾಯ್ಡ್ ಸಾವಿಗೆ ಕಾರಣರಾದ ಡೆರಿಕ್ ಮತ್ತು ಇತರ ಮೂವರು ಪೊಲೀಸರ ವಿರುದ್ಧ ಫ್ಲಾಯ್ಡ್ ಕುಟುಂಬ ದಾವೆ ಹೂಡಿತ್ತು.ಇದೀಗ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಡೆರೆಕ್ ಚೌವಿನ್ ದೋಷಿ ಎಂದು ಹೆನ್ನೆಪಿನ್ ಕೌಂಟಿ ಕೋರ್ಟ್ ನಿಂದ ಮಹತ್ವದ ತೀರ್ಪು ಪ್ರಕಟಿಸಿದೆ.ಪೊಲೀಸ್ ಅಧಿಕಾರಿ ಡೆರಿಕ್ ಚೌವೀನ್ ನರಹತ್ಯೆ ಮತ್ತುಕೊಲೆ ಮಾಡಿದ್ದಾರೆ ಎಂದು ಕೋರ್ಟ್ ನೀಡಿದ ತೀರ್ಪಿನಲ್ಲಿ ಹೇಳಿದೆ.

ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ನಮಗೆ ಜಾರ್ಜ್ ಪ್ಲಾಯ್ಡ್ ಅವರನ್ನು ಮರಳಿ ಪಡೆಯಲಾಗದಿದ್ದರೂಮ್ ಈ ತೀರ್ಪು ಅಮೆರಿಕ ನ್ಯಾಯ ಪಥದಲ್ಲಿ ಸಾಗುವ ಮುನ್ನಡೆಗೆ ಒಂದು ದೊಡ್ಡ ಹೆಜ್ಜೆ ಎಂದು ಹೇಳಿದ್ದಾರೆ.

ಕೊರೊನಾ ಹೆಚ್ಚಳ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆಯಿಂದ ತುರ್ತು ವಿಚಾರಗಳನ್ನು ಮಾತ್ರ..!