ಬಿಜೆಪಿ ಸಂಸದನ ನಿವಾಸದ ಬಳಿ 15 ಕಡೆಗಳಲ್ಲಿ ಕಚ್ಚಾ ಬಾಂಬ್‌ ದಾಳಿ - ಮಗು ಸೇರಿ ಮೂವರಿಗೆ ಗಾಯ - BC Suddi
ಬಿಜೆಪಿ ಸಂಸದನ ನಿವಾಸದ ಬಳಿ 15 ಕಡೆಗಳಲ್ಲಿ ಕಚ್ಚಾ ಬಾಂಬ್‌ ದಾಳಿ – ಮಗು ಸೇರಿ ಮೂವರಿಗೆ ಗಾಯ

ಬಿಜೆಪಿ ಸಂಸದನ ನಿವಾಸದ ಬಳಿ 15 ಕಡೆಗಳಲ್ಲಿ ಕಚ್ಚಾ ಬಾಂಬ್‌ ದಾಳಿ – ಮಗು ಸೇರಿ ಮೂವರಿಗೆ ಗಾಯ

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಜಗತ್ದಲ್‌‌‌‌‌ನಲ್ಲಿ 15 ಸ್ಥಳಗಳಲ್ಲಿ ನಡೆದ ಕಚ್ಚಾ ಬಾಂಬ್‌‌ ದಾಳಿಯಲ್ಲಿ ಒಂದು ಮಗು ಸೇರಿದಂತೆ ಮೂರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಜಗತ್ದಲ್‌‌‌ನ ಗಲಿ ಸಂಖ್ಯೆ 17ರಲ್ಲಿ ಈ ಘಟನೆ ನಡೆದಿದ್ದು, ಬಾರಕ್‌‌‌ಪುರದ ಬಿಜೆಪಿ ಸಂಸದ ಅರ್ಜುನ್‌‌‌ ಸಿಂಗ್‌ ಅವರ ನಿವಾಸದ ಸಮೀಪದಲ್ಲೇ ಈ ಘಟನೆ ನಡೆದಿದೆ.

ಸುಮಾರು 15 ಕಡೆಗಳಲ್ಲಿ ಈ ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿವೆ ಎಂದು ವರದಿಗಳು ತಿಳಿಸಿವೆ. ಅಲ್ಲದೇ, ಕೆಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿ ಮಾಡಲಾಗಿದೆ.

ಸ್ಥಳಕ್ಕೆ ಆಗಮಿಸಿದ ಜಗತ್ದಲ್‌‌‌‌‌‌ ಪೊಲೀಸರು, ಸ್ಥಳೀಯರ ಪ್ರತಿಭಟನೆಯನ್ನು ಎದುರಿಸಿದ್ದಾರೆ. ಈ ವೇಳೆ ಪೊಲೀಸರ ಎದುರೇ ಒಂದು ಬಾಂಬ್‌ ಎಸೆಯಲಾಗಿದೆ ಎಂದು ವರದಿ ಹೇಳಿದೆ.

ಬಾಂಬ್‌ ದಾಳಿ ನಡೆಸಿದವರು ಯಾರು, ಈ ದಾಳಿಯ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆ ಮಾಹಿತಿ ದೊರೆತಿಲ್ಲ.

error: Content is protected !!