ಬಿಜೆಪಿಯವರು ಎಲ್ಲಿಯಾದರೂ ಸೋಲುತ್ತೇವೆ ಎಂದು ಹೇಳಿದ್ದಾರಾ? : ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಾರ್ಟಿ: ಸಿದ್ದರಾಮಯ್ಯ - BC Suddi
ಬಿಜೆಪಿಯವರು ಎಲ್ಲಿಯಾದರೂ ಸೋಲುತ್ತೇವೆ ಎಂದು ಹೇಳಿದ್ದಾರಾ? : ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಾರ್ಟಿ: ಸಿದ್ದರಾಮಯ್ಯ

ಬಿಜೆಪಿಯವರು ಎಲ್ಲಿಯಾದರೂ ಸೋಲುತ್ತೇವೆ ಎಂದು ಹೇಳಿದ್ದಾರಾ? : ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಾರ್ಟಿ: ಸಿದ್ದರಾಮಯ್ಯ

ರಾಯಚೂರು: “ಬಿಜೆಪಿಯವರು ಎಲ್ಲಿಯಾದರೂ ಸೋಲುತ್ತೇವೆ ಎಂದು ಹೇಳಿದ್ದಾರಾ?. ಬಿಜೆಪಿ ಎಂದರೆ ಭ್ರಷ್ಟಾಚಾರ ಜನತಾ ಪಾರ್ಟಿ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮುದಗಲ್‌‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸಿಎಂ ಮನೆಗೆ ಹೋಗುತ್ತಾರೆ ಎಂದು ಅದೇ ಪಕ್ಷದ ಯತ್ನಾಳ್‌‌‌ ತಿಳಿಸಿದ್ದಾರೆ. ಸಿಎಂ ಬಿಎಸ್‌ವೈ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮೊದಲಿನಿಂದಲೂ ಅವರು ಸುಳ್ಳು ಹೇಳಿಕೊಂಡು ಬಂದಿದ್ದಾರೆ” ಎಂದು ತಿಳಿಸಿದ್ದಾರೆ.

“ಕಾಂಗ್ರೆಸ್‌ ಅಡ್ರೆಸ್‌ ಇಲ್ಲದೇ ಹೋಗುತ್ತದೆ ಎನ್ನುವುದ ಬಾಲಿಶತನದ ಹೇಳಿಕೆಯಾಗಿದೆ. ನೂರಕ್ಕೇ ನೂರರಷ್ಟು ಸೋಲುತ್ತೇವೆ ಎನ್ನುವುದು ಬಿಜೆಪಿಗೆ ತಿಳಿದಿದೆ. ಬಿಜೆಪಿಗರು ಚುನಾವಣೆಯಲ್ಲಿ ದುಡ್ಡುಹಂಚಿಕೆ ಮಾಡಿದರೆ ಕಾಂಗ್ರೆಸ್ಸಿಗರು ಸುಮ್ಮನೆ ಕೂರಬೇಕಾ?” ಎಂದು ಕೇಳಿದ್ದಾರೆ.

ಯಡಿಯೂರಪ್ಪ ನೇತೃತ್ವದ ಸರ್ಕಾರವು ಭ್ರಷ್ಟ ಸರ್ಕಾರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ: ರಣದೀಪ್‌ ಸುರ್ಜೇವಾಲಾ