ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದೆ: ಸಚಿವ ಸುಧಾಕರ್‌‌ - BC Suddi
ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದೆ: ಸಚಿವ ಸುಧಾಕರ್‌‌

ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದೆ: ಸಚಿವ ಸುಧಾಕರ್‌‌

ಬೆಂಗಳೂರು: “ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದೆ” ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ರೆಮಿಡಿಸ್ವಿರ್ ಔಷಧದ ಸಮರ್ಪಕ ಪೂರೈಕೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅನ್ನು ನೋಡಲ್ ಏಜೆನ್ಸಿಯಾಗಿ ನಿಯೋಜಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರ ಶಿಫಾರಸ್ಸು ಮಾಡಿರುವ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಅವಶ್ಯಕ ರೆಮಿಡಿಸ್ವಿರ್ ಔಷಧ ಸರಬರಾಜು ಮಾಡಲು ಎಸ್‌‌‌‌‌ಎಎಸ್‌‌ಟಿಗೆ ಹೊಣೆಗಾರಿಕೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

“ಸ್ವಯಂ ಪ್ರೇರಿತರಾಗಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ಚಿಕಿತ್ಸೆಗೆ ರೆಮಿಡಿಸ್ವಿರ್ ಔಷಧ ಪೂರೈಸಲು ಶ್ರೀ ಕೆಂಪಯ್ಯ ಸುರೇಶ್, ಉಪ ಔಷಧ ನಿಯಂತ್ರಕರರು, ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೋಂಕಿತರ ಎಸ್‌‌ಆರ್‌‌ಎಫ್‌‌ ಐಡಿ ಮುಂತಾದ ವಿವರಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಒದಗಿಸಿ ಔಷಧ ಪಡೆಯಬಹುದು” ಎಂದಿದ್ದಾರೆ.

‘ವೈರಸ್‌, ವಾಕ್ಸಿನ್’ ‌: ಬಿಜೆಪಿ, ಕಾಂಗ್ರೆಸ್‌ ಟ್ವೀಟ್‌ ವಾರ್‌