ಇಂದು ಸಂಜೆ 7 ಕ್ಕೆ ಪರೀಕ್ಷಾ ಪೇ ಚರ್ಚಾ ಸಂವಾದ : ವರ್ಚುವಲ್ ಕಾರ್ಯಮಕ್ಕೆ ಹೆಚ್ಚಿದ ಉತ್ಸಾಹ.. - BC Suddi
ಇಂದು ಸಂಜೆ 7 ಕ್ಕೆ ಪರೀಕ್ಷಾ ಪೇ ಚರ್ಚಾ ಸಂವಾದ : ವರ್ಚುವಲ್ ಕಾರ್ಯಮಕ್ಕೆ ಹೆಚ್ಚಿದ ಉತ್ಸಾಹ..

ಇಂದು ಸಂಜೆ 7 ಕ್ಕೆ ಪರೀಕ್ಷಾ ಪೇ ಚರ್ಚಾ ಸಂವಾದ : ವರ್ಚುವಲ್ ಕಾರ್ಯಮಕ್ಕೆ ಹೆಚ್ಚಿದ ಉತ್ಸಾಹ..

ನವದೆಹಲಿ: ಪ್ರತಿವರ್ಷ ಮಾರ್ಚ್ ಕೊನೆಯಲ್ಲಿ ನಡೆಯುತ್ತಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲೊಂದು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಮಹಾಮಾರಿ ಕೊರೊನಾದಿಂದಾಗಿ ಈ ವರ್ಷ ತಡವಾಗಿ ನಡೆಯುತ್ತಿದೆ. ಹೌದು ಪ್ರತಿವರ್ಷ ಮಾರ್ಚ್ ಅಂತ್ಯಕ್ಕೆ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆಗೆ ಹೇಗೆ ಸಿದ್ದವಾಗಬೇಕು, ಏನು ಮಾಡಬೇಕು ಎಂದು ಸಲಹೆ ನೀಡುವ ಸಂವಾದ ಕಾರ್ಯಕ್ರಮ ಇಂದು ನಡೆಯುತ್ತಿದೆ.

ಈ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ವರ್ಚುವಲ್ ಆಗಿ ನಡೆಸುತ್ತಿದ್ದು,ಇಂದು ಸಂಜೆ 7 ಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮಾತನಾಡಲಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಈ ಕಾರ್ಯಕ್ರಮವನ್ನು ಟಿವಿ ಚಾನೆಲ್ ಗಳಲ್ಲಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ , http:education.gov.in,, ಯೂಟ್ಯೂಬ್ ಚಾನೆಲ್, mygovindia ಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಧಾನಿಯಾದ ಬಳಿಕ ಪರೀಕ್ಷಾ ಪೆ ಚರ್ಚಾ ಮೋದಿಯವರದ್ದು ನಾಲ್ಕನೇ ಅವತರಣಿಕೆ ಪ್ರಸಾರವಾಗುತ್ತಿದ್ದು, ಪರೀಕ್ಷೆ ಯ ಒತ್ತಡದಿಂದ ಹೇಗೆ ಹೊರಬರಬೇಕು ಎಂಬ ಕುರಿತು ಮಕ್ಕಳಿಗೆ ಸಲಹೆ, ಸೂಚನೆ ನೀಡಲಿದ್ದಾರೆ.

‘ಕೋಬ್ರಾ ಕಮಾಂಡೋ ಸುರಕ್ಷಿತ’ : ಪ್ರಕಟಣೆ, ಫೋಟೋ ಬಿಡುಗಡೆ ಮಾಡಿದ ನಕ್ಸಲರು

error: Content is protected !!