ಕೊರೊನಾ ವೈರಸ್: ಮೂರನೇ ಅಲೆಯ ಬಗ್ಗೆ ಭಯಾನಕ ಮಾಹಿತಿ ಬಿಚ್ಚಿಟ್ಟ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ - BC Suddi
ಕೊರೊನಾ ವೈರಸ್:  ಮೂರನೇ ಅಲೆಯ ಬಗ್ಗೆ ಭಯಾನಕ ಮಾಹಿತಿ ಬಿಚ್ಚಿಟ್ಟ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ

ಕೊರೊನಾ ವೈರಸ್: ಮೂರನೇ ಅಲೆಯ ಬಗ್ಗೆ ಭಯಾನಕ ಮಾಹಿತಿ ಬಿಚ್ಚಿಟ್ಟ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ

ಮುಂಬೈ: ಹೆಮ್ಮಾರಿ ಕೊರೊನಾ ವೈರಸ್​ ಎರಡನೇ ಅಲೆಯು ದೇಶದಲ್ಲಿ ಆತಂಕ ಸೃಷ್ಟಿಸಿದೆ. ಈ ಮಧ್ಯೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ ಕೋವಿಡ್‌-19 ಮೂರನೇ ಅಲೆಯ ಬಗ್ಗೆ ಭಯಾನಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮುಂಬೈನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ರಾಜೇಶ್​ ತೋಪೆ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ ಜುಲೈ ಅಥವಾ ಆಗಸ್ಟ್​ನಲ್ಲಿ ಮಹಾರಾಷ್ಟ್ರವು ಕೊರೊನಾ ಮೂರನೇ ಅಲೆಗೆ ಸಾಕ್ಷಿಯಾಗಲಿದೆ. ಕೋವಿಡ್ ಎರಡನೇ ಅಲೆಗೆ ಮಹಾರಾಷ್ಟ್ರವು ದಿಕ್ಕೆಟ್ಟಿದೆ. ಆಕ್ಸಿಜನ್​ ಹಾಹಾಕಾರ ಉದ್ಭವವಾಗಿದೆ. ಮೇ ಅಂತ್ಯದ ವೇಳೆಗೆ ರಾಜ್ಯವು ಕೊರೊನಾ ಪ್ರಕರಣಗಳು ಕಡಿಮೆ ಆಗಲಿದೆ. ಆದರೆ ಜುಲೈ ಅಥವಾ ಆಗಸ್ಟ್‌ನಲ್ಲಿ ಇದು ಮೂರನೇ ಅಲೆ ಉಂಟಾದರೆ ರಾಜ್ಯ ಆಡಳಿತಕ್ಕೆ ಭಾರೀ ಸವಾಲುಗಳು ಎದುರಾಗಲಿದೆ” ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನಿನ್ನೆ (ಏಪ್ರಿಲ್‌ 29)ರಂದು ಒಂದೇ ದಿನಕ್ಕೆ 66,159 ಜನರಿಗೆ ಕೊರೊನಾ ದೃಢಪಟ್ಟಿತ್ತು. ಜೊತೆಗೆ 771 ಮಂದಿ ಮೃತಪಟ್ಟಿದ್ದಾರೆ. ಈವರೆಗೂ 45,39,553 ಪ್ರಕರಣಗಳು ವರದಿ ಆಗಿದ್ದು, 67,985 ಮಂದಿ ಮೃತಪಟ್ಟಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಮೇ 15ರವರೆಗೆ ಲಾಕ್​ಡೌನ್​ ಜಾರಿಯಲ್ಲಿದೆ.

ಗೋವಾ ಸರ್ಕಾರ ಅಲರ್ಟ್: ಮೇ 3ರವರೆಗೆ ಗೋವಾ ಸಂಪೂರ್ಣ ಸ್ತಬ್ಧ