ದಿವಂಗತ ಸುಶಾಂತ್ ಸಿಂಗ್ ರಜಪೂತ್ ಹೆಸರು ಇನ್ನು ಜೀವಂತವಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಸಹೋದರಿ ಶ್ವೇತಾ ಸಿಂಗ್ - BC Suddi
ದಿವಂಗತ ಸುಶಾಂತ್ ಸಿಂಗ್ ರಜಪೂತ್ ಹೆಸರು ಇನ್ನು ಜೀವಂತವಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಸಹೋದರಿ ಶ್ವೇತಾ ಸಿಂಗ್

ದಿವಂಗತ ಸುಶಾಂತ್ ಸಿಂಗ್ ರಜಪೂತ್ ಹೆಸರು ಇನ್ನು ಜೀವಂತವಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಸಹೋದರಿ ಶ್ವೇತಾ ಸಿಂಗ್

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಆಸ್ಟ್ರೇಲಿಯಾದಲ್ಲಿ ಸುಶಾಂತ್ ಸಿಂಗ್ ಸ್ಮರಣಾರ್ಥ ನಿರ್ಮಿಸಲಾದ ಬೆಂಚ್ ಒಂದರ ಫೋಟೋವನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಬೆಂಚ್ ಮೇಲೆ ಅಂಟಿಸಲಾದ ನಾಮಫಲಕದಲ್ಲಿ ಸುಶಾಂತ್ ಸಿಂಗ್‌ರನ್ನ ಖಗೋಳ ವಿಜ್ಞಾನಿ, ಪರಿಸರ ಪ್ರಿಯ ಹಾಗೂ ಮಾನವೀಯ ಗುಣವುಳ್ಳ ವ್ಯಕ್ತಿ ಎಂದು ಬಣ್ಣಿಸಲಾಗಿದೆ.

ಈ ಫೋಟೋಗಳನ್ನ ಶೇರ್ ಮಾಡಿರುವ ಶ್ವೇತಾ ಸಿಂಗ್, ಅವನು ಇನ್ನು ಜೀವಂತವಾಗಿದ್ದಾನೆ. ಆತನ ಹೆಸರು ಜೀವಂತವಾಗಿದೆ. ಆತನ ಕಂಪು ಇನ್ನೂ ಜೀವಂತವಾಗಿದೆ. ಇದು ಶುದ್ಧ ಆತ್ಮವಿರುವವರಿಗೆ ಸಿಗುವ ಫಲಶ್ರುತಿಯಾಗಿದೆ. ನೀವು ದೇವರ ಮಗು. ನೀನು ಎಂದಿಗೂ ಜೀವಂತವಾಗಿರುತ್ತೀಯಾ ಎಂದು ಶೀರ್ಷಿಕೆ ನೀಡಿದ್ದಾರೆ.

https://www.instagram.com/p/CMxw5TKFAHr/?utm_source=ig_web_button_share_sheet

error: Content is protected !!