'ಮುಂದಿನ ಶೈಕ್ಷಣಿಕ ವರ್ಷ ಜುಲೈ 15 ರಿಂದ ಆರಂಭಿಸುವ ಚಿಂತನೆ' - ಸಚಿವ ಸುರೇಶ್‌ ಕುಮಾರ್‌ - BC Suddi
‘ಮುಂದಿನ ಶೈಕ್ಷಣಿಕ ವರ್ಷ ಜುಲೈ 15 ರಿಂದ ಆರಂಭಿಸುವ ಚಿಂತನೆ’ – ಸಚಿವ ಸುರೇಶ್‌ ಕುಮಾರ್‌

‘ಮುಂದಿನ ಶೈಕ್ಷಣಿಕ ವರ್ಷ ಜುಲೈ 15 ರಿಂದ ಆರಂಭಿಸುವ ಚಿಂತನೆ’ – ಸಚಿವ ಸುರೇಶ್‌ ಕುಮಾರ್‌

ತುಮಕೂರು:  ”ಮುಂದಿನ ಶೈಕ್ಷಣಿಕ ವರ್ಷವು ಜುಲೈ 15 ರಿಂದ ಆರಂಭಿಸುವ ಚಿಂತನೆ ನಡೆಸಲಾಗಿದೆ” ಎಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಸಿದ್ಧಗಂಗಾ ಮಠಕ್ಕೆ ಬುಧವಾರ ಭೇಟಿ ನೀಡಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದು, ”ಮುಂದಿನ ಶೈಕ್ಷಣಿಕ ವರ್ಷವು ಜುಲೈ 15 ರಿಂದ ಆರಂಭಿಸುವ ಚಿಂತನೆ ನಡೆಸಲಾಗಿದೆ” ಎಂದು ತಿಳಿಸಿದರು. ಹಾಗೆಯೇ, ”ಎರಡನೇ ಕೊರೊನಾ ಅಲೆ ಆರಂಭವಾಗಿದೆ. ಈ ಬಗ್ಗೆಯೂ ಗಮನದಲ್ಲಿರಿಸಬೇಕು” ಎಂದೂ ಹೇಳಿದರು.

”ನನಗೆ ಮಾರ್ಚ್ 1 ರಿಂದ 1-5 ತರಗತಿ ಆರಂಭ ಮಾಡುವ ಆಸಕ್ತಿಯಿತ್ತು. ಆದರೆ ಕೊರೊನಾ ಅಧಿಕವಿರುವ ಹಿನ್ನೆಲೆ ಶಾಲೆ ಆರಂಭ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದೇವೆ” ಎಂದು ತಿಳಿಸಿದರು.

”1 ರಿಂದ 5 ನೇ ತರಗತಿ ಪ್ರಾರಂಭ ಮಾಡುವಂತಿಲ್ಲ. ಈ ವಿಚಾರದಲ್ಲಿ ಖಾಸಗಿ ಶಾಲೆಗಳು ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

”ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಮಾಡಬೇಕೆಂಬ ಆಗ್ರಹವಿದೆ. ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು” ಎಂದೂ ತಿಳಿಸಿದರು.

ಇನ್ನು ಅಜೀಂ ಪ್ರೇಮ್‌ ಜಿ ವಿವಿ ವರದಿಯ ಬಗ್ಗೆ ಉಲ್ಲೇಖ ಮಾಡಿದ ಅವರು, ”ಶಾಲೆ ಆರಂಭವಾಗದ ಕಾರಣ ಮಕ್ಕಳು ಗಣಿತ ಹಾಗೂ ಭಾಷೆ ಮರೆತಿದ್ದಾರೆ ಎಂಬುದು ಈ ವರದಿಯಲ್ಲಿದೆ. ಇದೊಂದು ಆಘಾತಕಾರಿ ವರದಿ” ಎಂದರು.

error: Content is protected !!