ಆಕ್ಸಿಜನ್ ವಿಚಾರದಲ್ಲಿ ಸಚಿವ ಸುರೇಶ್ ಕುಮಾರ್‌, ನಾರಾಯಣ ಗೌಡರು ಆಕ್ಸಿಜನ್‌ಗಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ: ಪ್ರತಾಪ್‌ ಸಿಂಹ ಆರೋಪ - BC Suddi
ಆಕ್ಸಿಜನ್ ವಿಚಾರದಲ್ಲಿ ಸಚಿವ ಸುರೇಶ್ ಕುಮಾರ್‌, ನಾರಾಯಣ ಗೌಡರು ಆಕ್ಸಿಜನ್‌ಗಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ: ಪ್ರತಾಪ್‌ ಸಿಂಹ ಆರೋಪ

ಆಕ್ಸಿಜನ್ ವಿಚಾರದಲ್ಲಿ ಸಚಿವ ಸುರೇಶ್ ಕುಮಾರ್‌, ನಾರಾಯಣ ಗೌಡರು ಆಕ್ಸಿಜನ್‌ಗಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ: ಪ್ರತಾಪ್‌ ಸಿಂಹ ಆರೋಪ

ಮೈಸೂರು : ”ರಾಜ್ಯ ಸರ್ಕಾರ ಈವರೆಗೂ ಆಕ್ಸಿಜನ್‌ಗೆ ಕೋಟಾ ನಿಗದಿ ಮಾಡಿಲ್ಲ. ಆಕ್ಸಿಜನ್ ವಿಚಾರದಲ್ಲಿ ಸಚಿವ ಸುರೇಶ್ ಕುಮಾರ್‌, ನಾರಾಯಣ ಗೌಡರು ಆಕ್ಸಿಜನ್‌ಗಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ” ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ”ನಿಮಗೆ ಬೇಕಾದಷ್ಟು ಕೋಟವನ್ನು ಮುಖ್ಯಮಂತ್ರಿ ಮನವೊಲಿಸಿ ನೀವು ಪಡೆದುಕೊಳ್ಳಿ. ನಮ್ಮಲ್ಲಿ ಇರುವುದು ರೀಫೀಲ್ಲಿಂಗ್‌ ಕೇಂದ್ರ. ನಾವು ಆಕ್ಸಿಜನ್‌ ಅನ್ನು ಉತ್ಪಾದನೆ ಮಾಡುತ್ತಿಲ್ಲ. ನಿಮಗೆ ರಾಜ್ಯ ಸರ್ಕಾರದಿಂದ ಕೋಟಾ ಲಭಿಸಿದ ಬಳಿಕ ಇಲ್ಲಿ ಬಂದು ಆಕ್ಸಿಜನ್‌ ಸಿಲಿಂಡರ್‌ ತುಂಬಿಸುಕೊಂಡು ಹೋಗಿ” ಎಂದು ಸಚಿವ ಸುರೇಶ್ ಕುಮಾರ್‌, ನಾರಾಯಣ ಗೌಡರಿಗೆ ಪ್ರತಾಪ ಸಿಂಹ ಹೇಳಿದ್ದಾರೆ.

”ಮೈಸೂರಿನಿಂದ ಬಂದು ಬೆದರಿಸಿ ಆಕ್ಸಿಜನ್‌ ಕೊಂಡುಯ್ಯುತ್ತೇವೆ ಎಂಬಂತಹ ವರ್ತನೆಗಳು ಬೇಡ. ನಾವು ಮಾನವೀಯತೆ, ಪ್ರೀತಿಯಿಂದ ಮಂಡ್ಯ ಆಗಿರಲಿ, ಚಾಮರಾಜನಗರವಾಗಿರಲಿ ನೆರೆಹೊರೆಯ ಜಿಲ್ಲೆಗಳಿಗೆ ನಾವು ಆಕ್ಸಿಜನ್‌ ನೀಡುತ್ತಿದ್ದೇವೆ. ನಮ್ಮ ಅಗತ್ಯವೂ ನಾವು ನೋಡಿಕೊಳ್ಳಬೇಕಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

”ನೀವೇ ಖುದ್ದಾಗಿ, ಪೊಲೀಸರೊಂದಿಗೆ ಬಂದು ಆಕ್ಸಿಜನ್‌ ತುಂಬಿಸಿಕೊಂಡು ಹೋಗುವಂತದ್ದು ಉತ್ತಮ ಬೆಳವಣಿಗೆಯಲ್ಲ. ಇದನ್ನು ನೀವು ನಿಯಂತ್ರಣ ಮಾಡಿಕೊಳ್ಳಬೇಕು. ಚಾಮರಾಜನಗರ ಘಟನೆಯನ್ನು ಇಟ್ಟುಕೊಂಡು ಮೈಸೂರಿನ ಮೇಲೆ ದಬ್ಬಾಳಿಕೆ ನಡೆಸಬಹುದು ಎಂದುಕೊಂಡರೆ ಅದು ತಪ್ಪಾಗುತ್ತದೆ. ನಾವು ಪ್ರತಿರೋಧ ಮಾಡಬೇಕಾಗುತ್ತದೆ” ಎಂದು ಸಚಿವ ಸುರೇಶ್ ಕುಮಾರ್‌, ನಾರಾಯಣ ಗೌಡರಿಗೆ ಎಚ್ಚರಿಕೆ ನೀಡಿದರು.

”ರಾಜ್ಯ ಸರ್ಕಾರದಲ್ಲಿ ತಮ್ಮ ಬೇಡಿಕೆಯನ್ನು ಹೇಳಲಿ. ಅದನ್ನು ಬಿಟ್ಟು ಇಲ್ಲಿ ಬಂದು ಗ್ಯಾಸ್‌ ಏಜನ್ಸಿಯಲ್ಲಿ ಠಿಕಾಣಿ ಹೂಡಿದರೆ, ನಾವು ಆಕ್ಸಿಜನ್‌ ತುಂಬಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರೆ, ನಾವು ಈ ಪರಿಸ್ಥಿತಿಯಲ್ಲಿ ಹೇಗೆ ನಿಭಾಯಿಸಲು ಆಗುತ್ತದೆ” ಎಂದು ಪ್ರಶ್ನಿಸಿದರು.

”ನಾವು ಈಗಾಗಲೇ ಕೊರತೆಯ ವಾತಾವರಣದಲ್ಲಿ ಇದ್ದೇವೆ. ನಾವು ಆದರೂ ಸಹಕಾರ ನೀಡು‌ತ್ತಿದ್ದೇವೆ. ಹಾಗಿರುವಾಗ ಇಲ್ಲಿ ಬಂದು ಒತ್ತಡದ ವಾತಾವರಣ ಸೃಷ್ಟಿ ಮಾಡುವುದು ಸರಿಯಲ್ಲ. ನೀವು ಸರ್ಕಾರದ ಬಳಿ ಮನವಿ ಮಾಡಿ ಕೋಟಾ ನಿಗದಿ ಪಡಿಸಿದರೆ, ನಮಗೂ ಗೊಂದಲ ಇರುವುದಿಲ್ಲ” ಎಂದು ಹೇಳಿದರು.

ಕೇಂದ್ರ ಸರ್ಕಾರ ದೇಶದ ಪರಿಸ್ಥಿತಿ ಹದಗೆಟ್ಟಿದ್ದರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ : ಚಿದಂಬರಂ