ಸೂರತ್‌ನಲ್ಲಿ ಒಬ್ಬ ತಂದೆ ತನ್ನ ಎರಡು ತಿಂಗಳ ಮಗುವಿಗೆ ಏನು ಗಿಪ್ಟ್ ಕೊಟ್ಟಿದ್ದಾರೆ ಗೊತ್ತಾ..? - BC Suddi
ಸೂರತ್‌ನಲ್ಲಿ ಒಬ್ಬ ತಂದೆ ತನ್ನ ಎರಡು ತಿಂಗಳ ಮಗುವಿಗೆ ಏನು ಗಿಪ್ಟ್ ಕೊಟ್ಟಿದ್ದಾರೆ ಗೊತ್ತಾ..?

ಸೂರತ್‌ನಲ್ಲಿ ಒಬ್ಬ ತಂದೆ ತನ್ನ ಎರಡು ತಿಂಗಳ ಮಗುವಿಗೆ ಏನು ಗಿಪ್ಟ್ ಕೊಟ್ಟಿದ್ದಾರೆ ಗೊತ್ತಾ..?

ಸೂರತ್ : ತಂದೆ ಮಕ್ಕಳ ಮೇಲೆ ತುಂಬಾ ಆಸೆ ಆಕಾಂಶೆಯನ್ನು ಹೊತ್ತುಕೊಂಡು ಇರುತ್ತಾರೆ. ಆದರೆ ಇಲ್ಲಿ ಒಬ್ಬರು ತನ್ನ ಮಗನಿಗಾಗಿ ಏನು ಮಾಡಿದ್ದಾರೆ ನೋಡಿ. ಆ ತಂದೆ ತನ್ನ ಎರಡು ತಿಂಗಳ ಮಗುವಿನ ಮೇಲೆ ಎಲ್ಲಿಲ್ಲದ ಪ್ರೀತಿ. ತನ್ನ ಮಗನಿಗಾಗಿ ಏನಾದ್ರೂ ಗಿಫ್ಟ್ ಕೊಡಬೇಕು ಎಂಬ ಹಂಬಲ. ಇವರು ಸೂರತ್ ನ ಸಾರ್ಥನಾ ಪ್ರದೇಶದ ನಿವಾಸಿ ವಿಜಯ್ ಕ್ಯಾಥೇರಿಯಾ, ಗಾಜಿನ ವ್ಯಾಪಾರಿಯಾಗಿದ್ದನು. ಇಂತಹ ವ್ಯಾಪಾರಿ, ತನ್ನ ಎರಡು ತಿಂಗಳ ಮಗ ನಿತ್ಯಾಗೆ ಉಡುಗೋರೆ ನೀಡಬೇಕು ಎಂಬುದಾಗಿ ಮನಸ್ಸು ಮಾಡಿದ.

ಅದಕ್ಕಾಗಿ ಆತ ನಿತ್ಯಾ ಸದಾ ನಗು ನಗುತ್ತಲಿ ಇರಬೇಕು ಎಂಬುದಕ್ಕಾಗಿ ಚಂದ್ರನ ಮೇಲೆ ಭೂಮಿ ಖರೀದಿಸಿ, ಉಡುಗೋರಿ ನೀಡೋದಕ್ಕೆ ನಿರ್ಧರಿಸಿದರು. ಅದರಂತೆ ಆದ ಚಂದ್ರನ ಮೇಲೆ ಭೂಮಿ ಖರೀದಿಸೋದಕ್ಕಾಗಿ ನ್ಯೂಯಾರ್ಕ್ ಇಂಟರ್ ನ್ಯಾಷನಲ್ ಲೂನಾರ್ ಲ್ಯಾಂಡ್ ರಿಜಿಸ್ಟ್ರಿ ಕಂಪನಿಗೆ ತನ್ನ ಇಂಗಿತವನ್ನು ಈ-ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದನು. ಅರ್ಜಿಯನ್ನು ಸ್ವೀಕರಿಸಿದಂತ ಕಂಪನಿ, ಚಂದ್ರನ ಮೇಲೆ ಭೂಮಿ ಖರೀದಿಸೋದಕ್ಕೆ ಅವಕಾಶ ನೀಡಿತು. ಹೀಗಾಗಿ ವಿಜಯ್ ಕ್ಯಾಥೇರಿಯಾ ನ್ಯೂಯಾರ್ಕ್ ಇಂಟರ್ ನ್ಯಾಷನಲ್ ಲೂನಾರ್ ಲ್ಯಾಂಡ್ ರಿಜಿಸ್ಟ್ರೀ ಕಂಪನಿ ಮೂಲಕ, ಮಾ.13ರಂದು ಚಂದ್ರನ ಮೇಲೆ 2 ಎಕರೆ ಭೂಮಿ ಖರೀದಿಸೋದಕ್ಕೆ ಸಲ್ಲಿಸಲಾಗಿದ್ದಂತ ಅರ್ಜಿಗೆ  ಸಂಬಂಧಸಿದಂತ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದೆ.

ಕಂಪನಿ ಕೇಳಿದಂತ ಎಲ್ಲಾ ದಾಖಲೆಗಳನ್ನು ಕೂಡ ಕಾನೂನಾತ್ಮಕವಾಗಿ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ವಿಜಯ್ ತನ್ನ ಮಗ ನಿತ್ಯಾಗೆ ಚಂದ್ರನ ಮೇಲೆ ಎರಡು ಎಕರೆ ಭೂಮಿ ಖರೀದಿಸುವಂತ ಅಂತಿಮ ಹಂತದ ಪ್ರಕ್ರಿಯೆಯಲ್ಲಿದ್ದು, ಕಂಪನಿ ಒಪ್ಪಿಗೆ ಸೂಚಿಸಿದ ನಂತ್ರದ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಂಡ್ರೇ.. ನಿತ್ಯಾಗೆ ತಂದೆ ವಿಜಯ್ ಚಂದ್ರನ ಮೇಲಿನ ಭೂಮಿಯನ್ನೇ ಗಿಫ್ಟ್ ಆಗಿ ನೀಡಿದಂತೆ ಆಗಲಿದೆ.

 

error: Content is protected !!