ಶೀಘ್ರವೇ ಬೆಂಗಳೂರು ಹುಬ್ಬಳ್ಳಿ ಮಧ್ಯೆ ಸೂಪರ್ ಪಾಸ್ಟ್ ರೈಲು : ಜೋಶಿ...! - BC Suddi
ಶೀಘ್ರವೇ ಬೆಂಗಳೂರು ಹುಬ್ಬಳ್ಳಿ ಮಧ್ಯೆ ಸೂಪರ್ ಪಾಸ್ಟ್ ರೈಲು : ಜೋಶಿ…!

ಶೀಘ್ರವೇ ಬೆಂಗಳೂರು ಹುಬ್ಬಳ್ಳಿ ಮಧ್ಯೆ ಸೂಪರ್ ಪಾಸ್ಟ್ ರೈಲು : ಜೋಶಿ…!

ಹುಬ್ಬಳ್ಳಿ : ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸೂಪರ್ ಫಾಸ್ಟ್ ರೈಲು ಆರಂಭಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮೌಖಿಕವಾಗಿ ಸಮ್ಮತಿ ಸೂಚಿಸಿದ್ದು, ಮುಂದಿನ ಆರು ತಿಂಗಳ ಒಳಗೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲು ಪ್ರಯಾಣದ ಅವಧಿ ಎಂಟು ಗಂಟೆ ಇದ್ದು, ಸೂಪರ್ ಫಾಸ್ಟ್ ರೈಲು ನಾಲ್ಕು ಗಂಟೆಯಲ್ಲೇ ತಲುಪಲಿದೆ’ ಎಂದರು.

ಜನರು ಎಚ್ಚರಿಕೆಯಿಂದ ಇರಬೇಕು, ಕೊರೊನಾ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ’ : ಸಚಿವ ಸುಧಾಕರ್

‘ಮ್ಯಾಂಗನೀಸ್, ಕಲ್ಲಿದ್ದಲು ಗಣಿಗಾರಿಕೆ ಕುರಿತ ರಾಜ್ಯಗಳ ಅಧಿಕಾರವನ್ನು ಕೇಂದ್ರ ಕಸಿದುಕೊಳ್ಳುವ ಯತ್ನ ಮಾಡಿಲ್ಲ. ಈ ಹಿಂದಿದ್ದ ಮಾರ್ಗಸೂಚಿಗಳನ್ನೇ ಜಾರಿಗೊಳಿಸಲಾಗಿದೆ. ಅದರ ಪರಿಣಾಮ  45 ಸಾವಿರ ಕೋಟಿ ಸಂಗ್ರಹವಾಗಿದ್ದು, 25 ಸಾವಿರ ಕೋಟಿ ಗಣಿಗಾರಿಕೆ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಲಾಗಿದೆ. ಗಣಿಗಾರಿಕೆಯಿಂದ ಬಂದ ಆದಾಯವನ್ನು ಪುನರ್ವಸತಿ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

error: Content is protected !!