ಮತ್ತೆ ಸಂಚಾರ ಆರಂಭಿಸಿದ ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ದೈತ್ಯ ಹಡಗು - BC Suddi
ಮತ್ತೆ ಸಂಚಾರ ಆರಂಭಿಸಿದ ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ದೈತ್ಯ ಹಡಗು

ಮತ್ತೆ ಸಂಚಾರ ಆರಂಭಿಸಿದ ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ದೈತ್ಯ ಹಡಗು

ಕಾರಿಯೋ: ಕಳೆದ ಆರು ದಿನಗಳಿಂದ ಸುಯೆಜ್‌ ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿಕೊಂಡಿದ್ದ ಬೃಹತ್‌ ಕಂಟೇನರ್ ‘ಎವರ್ ಗ್ರೀನ್’ ಹಡಗು ಸೋಮವಾರ ಮತ್ತೆ ಸಂಚಾರ ಆರಂಭಿಸಿದೆ. ಸೋಮವಾರ ಕೊನೆಗೂ ಜಲಮಾರ್ಗದಲ್ಲಿ ಮರಳಿನ ರಾಶಿಯ ಹಿಡಿತದಿಂದ ಮುಕ್ತಗೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದರಿಂದ ಜಾಗತಿಕ ವಾಣಿಜ್ಯ ವಹಿವಾಟುಗಳ ಪ್ರಮುಖ ಹಾದಿ ತಿಳಿಯಾಗುವ ಭರವಸೆ ಮೂಡಿದೆ.

‘ಎವರ್ ಗ್ರೀನ್’ ಹಡಗು ಸುಯೆಜ್ ಕಾಲುವೆಯಲ್ಲಿ ನಿಂತ ಪರಿಣಾಮ ಕಳೆದ ಆರು ದಿನಗಳಿಂದ ಸುಮಾರು 450 ಹಡಗುಗಳು ಮುಂದೆ ಸಾಗಲಾಗದೆ ಸಂಚಾರ ದಟ್ಟಣೆ ಉಂಟಾಗಿತ್ತು . ಇದೀಗ ಹಡಗಿನ ಸುತ್ತಲೂ 59 ಅಡಿಗಳಷ್ಟು ಆಳದವರೆಗೂ ಸುಮಾರು 27,000 ಘನ ಮೀಟರ್‌ನಷ್ಟು ಮರಳನ್ನು ತೆಗೆಯಲಾಗಿದ್ದು, ಹಡಗನ್ನು ಭಾಗಶಃ ಹೂಳಿನಿಂದ ಮುಕ್ತಗೊಳಿಸಲಾಗಿದ್ದು, ಅದನ್ನು ನೇರಗೊಳಿಸಲು ಪ್ರಯತ್ನ ನಡೆಸಲಾಗಿತ್ತು.

‘ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಾಧನೆಗೈಯಲಿದೆ’ – ಶಾಗೆ ದೀದಿ ತಿರುಗೇಟು

ನಾಲ್ಕು ಫುಟ್‌ಬಾಲ್‌ ಮೈದಾನಗಳಿಗಿಂತ ಉದ್ದದ ‘ಎಂವಿ ಎವರ್‌ ಗ್ರಿವೆನ್‌’ ಬೃಹತ್‌ ಹಡಗು ಕಳೆದ ಮಂಗಳವಾರದಿಂದ ಸುಯೆಜ್‌ ಕಾಲುವೆಗೆ ಅಡ್ಡಲಾಗಿ ಸಿಲುಕಿಕೊಂಡಿತ್ತು. ಇದರಿಂದಾಗಿ ಜಗತ್ತಿನಾದ್ಯಂತ ಕಚ್ಚಾ ತೈಲ ಪೂರೈಕೆ ಸೇರಿದಂತೆ ಹಲವು ವಸ್ತುಗಳ ಸಾಗಣೆಯಲ್ಲಿ ವ್ಯತ್ಯವಾಗಿತ್ತು. ಇನ್ನು ಕಾಲುವೆಯಲ್ಲಿ ಉಂಟಾಗಿರುವ ಟ್ರಾಫಿಕ್‌ ಜಾಮ್‌ ಯಾವಾಗ ಸಹಜ ಸ್ಥಿತಿಗೆ ಮರಳಲಿದೆ ಎನ್ನುವುದು ತಿಳಿದು ಬಂದಿಲ್ಲ.

ಇಂಚ್ ಕೇಪ್ ಶಿಪ್ಪಿಂಗ್ ಸರ್ವೀಸ್ ಸಂಸ್ಥೆ ಈ ದೈತ್ಯ ಹಡಗನ್ನು ಸುಯೆಜ್ ಕಾಲುವೆಯ ರಹದಾರಿಯಿಂದ ತೆರವುಗೊಳಿಸಿದ್ದು, ಈ ಹಡಗು ತನ್ನ ಮುಂದಿನ ಸಂಚಾರವನ್ನು ಕೈಗೊಳ್ಳಬಹುದು ಎಂದು ತಿಳಿಸಿದೆ.

error: Content is protected !!