ಸುದೀಪ್ 'ಬೆಳ್ಳಿಹಬ್ಬ': 25 ವರ್ಷದ ಪಯಣಕ್ಕೆ ಶುಭಹಾರೈಸಿದ ಸಿಎಂ ಯಡಿಯೂರಪ್ಪ>ಭಾವುಕರಾದ ಸುದೀಪ್ - BC Suddi
ಸುದೀಪ್ ‘ಬೆಳ್ಳಿಹಬ್ಬ’: 25 ವರ್ಷದ ಪಯಣಕ್ಕೆ ಶುಭಹಾರೈಸಿದ ಸಿಎಂ ಯಡಿಯೂರಪ್ಪ>ಭಾವುಕರಾದ ಸುದೀಪ್

ಸುದೀಪ್ ‘ಬೆಳ್ಳಿಹಬ್ಬ’: 25 ವರ್ಷದ ಪಯಣಕ್ಕೆ ಶುಭಹಾರೈಸಿದ ಸಿಎಂ ಯಡಿಯೂರಪ್ಪ>ಭಾವುಕರಾದ ಸುದೀಪ್

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್ ಅವರಿಗಾಗಿ (ಮಾರ್ಚ್ 15) ರಂದು ‘ಸುದೀಪ್ ಬೆಳ್ಳಿಹಬ್ಬ’ ಆಯೋಜಿಸಲಾಗಿತ್ತು. ಸಿಎಂ ಯಡಿಯೂರಪ್ಪ, ನಟ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್‌, ರವಿಶಂಕರ್, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ಇನ್ನೂ ಕೆಲವು ಸಿನಿ ಹಾಗೂ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ‘ನನಗಿಂತಲೂ ಹಿರಿಯರು ಇಲ್ಲಿದ್ದಾರೆ. ನನಗಿಂತಲೂ ಮುಂಚೆ ಅವರು ಸಿನಿಯಾನ ಆರಂಭಿಸಿದ್ದಾರೆ, ಅವರ ನೆರಳಿನಲ್ಲಿ ನಾನು ಸಾಗಿಬಂದಿದ್ದೇನೆ’ ಎಂದರು.

‘ಕನ್ನಡ ಸಿನಿಮಾರಂಗದ ಅದ್ಭುತ ಇತಿಹಾಸದಲ್ಲಿ ನನ್ನನ್ನೂ ಒಂದು ಪುಟವಾಗಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ. ಈಗ ಹಿಂತಿರುಗಿ ನೋಡಿದಾಗ ನಾನು ನೀಡಿದ ಹಿಟ್ ಸಿನಿಮಾಗಳು ಗಳಿಸಿದ ಲಾಭ ಯಾವುದೂ ನೆನಪಿಗೆ ಬರುವುದಿಲ್ಲ. ಬದಲಿಗೆ ಸಿನಿಮಾ ಕಟ್ಟಿಕೊಟ್ಟ ಸುಂದರ ನೆನಪುಗಳು ಮಾತ್ರವೇ ಕಣ್ಣ ಮುಂದೆ ಮೂಡುತ್ತವೆ’ ಎಂದರು ಸುದೀಪ್.

‘ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವುದು ನಾನೊಬ್ಬನೇ ಅಲ್ಲ. ನಾನು 25 ವರ್ಷ ಪೂರೈಸಲು ಹಲವಾರು ಮಂದಿ ಪರೋಕ್ಷವಾಗಿ. ಪ್ರತ್ಯಕ್ಷವಾಗಿ ಸಹಾಯ ಮಾಡಿದ್ದಾರೆ. ನನ್ನೊಂದಿಗೆ ಅವರೂ ಸಿನಿಪಯಣ ಮಾಡಿದ್ದಾರೆ ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ’. ಸಿನಿಮಾ ರಂಗದ ಆರಂಭದ ದಿನಗಳಲ್ಲಿ ತಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನು, ತಾವು ಆದರ್ಶ ಅಂದುಕೊಂಡಿದ್ದ ವ್ಯಕ್ತಿಗಳನ್ನು ಸುದೀಪ್ ಅವರು ನೆನಪಿಸಿಕೊಂಡರು ಸುದೀಪ್. ಕೊರೊನಾ ಸಮಯದಲ್ಲಿ ಚಿತ್ರರಂಗಕ್ಕೆ ಸಹಾಯ ಮಾಡಿದ ಯಡಿಯೂರಪ್ಪ ಅವರಿಗೆ ವಿಶೇಷ ಧನ್ಯವಾದವನ್ನು ಸುದೀಪ್ ಹೇಳಿದರು.

error: Content is protected !!