ಈ ವಾರ ಬಿಗ್ ಬಾಸ್ ಗೆ ಕಿಚ್ಚ ಗೈರು : ಹುಷಾರಿಲ್ಲ ಟ್ವೀಟ್ ಮಾಡಿದ ಸುದೀಪ್ - BC Suddi
ಈ ವಾರ ಬಿಗ್ ಬಾಸ್ ಗೆ ಕಿಚ್ಚ ಗೈರು : ಹುಷಾರಿಲ್ಲ ಟ್ವೀಟ್ ಮಾಡಿದ ಸುದೀಪ್

ಈ ವಾರ ಬಿಗ್ ಬಾಸ್ ಗೆ ಕಿಚ್ಚ ಗೈರು : ಹುಷಾರಿಲ್ಲ ಟ್ವೀಟ್ ಮಾಡಿದ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾರೋಗ್ಯಕ್ಕೀಡಾಗಿದ್ದಾರೆ. ಈ ಬಗ್ಗೆ ಸುದೀಪ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ ‘ಹುಷಾರಿಲ್ಲ, ಈ ವೀಕೆಂಡ್ ನೊಳಗೆ ಚೇತರಿಸಿಕೊಳ್ಳುತ್ತೇನೆ ಎಂದು ಕೊಂಡಿದ್ದೆ. ಆದರೆ ನನ್ನ ವೈದ್ಯರ ಸಲಹೆ ಪ್ರಕಾರ ಇನ್ನೂ ಒಂದು ವಾರ ವಿಶ್ರಾಂತಿ ತೆಗೆದು ಕೊಳ್ಳಬೇಕಿದೆ.

ಈ ಕಾರಣಕ್ಕೆ ಬಿಗ್ ಬಾಸ್ ಈ ವಾರ ಎಪಿಸೋಡ್ ನಲ್ಲಿ ನಾನಿರುವುದಿಲ್ಲ. ಬಿಗ್ ಬಾಸ್ ಕ್ರಿಯೇಟಿವ್ ತಂಡ ಈ ವಾರದ ಎಲಿಮಿನೇಷನ್ ಗೆ ಏನು ಪ್ಲಾನ್ ಮಾಡಿದೆ ಎಂಬ ಬಗ್ಗೆ ನನಗೆ ಕುತೂಹಲವಿದೆ,’ ಎಂದು ಸುದೀಪ್ ಟ್ಟೀಟ್ ಮಾಡಿದ್ದಾರೆ.

ಕೋಟಿಗೊಬ್ಬ 3 ರಿಲೀಸ್ ಕೆಲಸಗಳು, ವಿಕ್ರಾಂತ್ ರೋಣಾ ಸಿನಿಮಾ ಚಿತ್ರೀಕರಣ ಹಾಗೂ ಬಿಗ್ ಬಾಸ್ ವೀಕೆಂಡ್ ಕಾರ್ಯಕ್ರಮ ಹೀಗೆ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡುತ್ತಿದ್ದ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರು ಆಗಿರಬಹುದು ಎನ್ನಲಾಗಿದೆ. ಕೇವಲ ಎರಡು ಗಂಟೆ ಪ್ರಸಾರವಾಗುವ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ಗೆ ಸುಮಾರು 10 ಗಂಟೆಗಳ ನಾನ್ ಸ್ಟಾಪ್ ಚಿತ್ರೀಕರಣ ಮಾಡಿ ಕೊಡುತ್ತಾರೆ ಸುದೀಪ್.
ಆದಷ್ಟು ಬೇಗ ಹುಷಾರಾಗಿ,’ ಎಂದು ಸುದೀಪ್ ಅಭಿಮಾನಿಗಳು ಟ್ಟೀಟ್ ಮಾಡಿದ್ದಾರೆ.

2 ಲಕ್ಷ ದಾಟಿದ ಸೋಂಕು : ದೇಶದಲ್ಲಿ 15,69,743 ಸಕ್ರಿಯ ಕೇಸ್