ಚಲಿಸುವ ಕಾರಿನ ಮೇಲೆ ಸ್ಟಂಟ್ : ಯುವಕನ ಬೇವರಿಳಿಸಿದ ಪೊಲೀಸ್ - BC Suddi
ಚಲಿಸುವ ಕಾರಿನ ಮೇಲೆ ಸ್ಟಂಟ್ : ಯುವಕನ ಬೇವರಿಳಿಸಿದ ಪೊಲೀಸ್

ಚಲಿಸುವ ಕಾರಿನ ಮೇಲೆ ಸ್ಟಂಟ್ : ಯುವಕನ ಬೇವರಿಳಿಸಿದ ಪೊಲೀಸ್

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪ್ರಚಾರ ಪಡೆಯುವ ಗೀಳಿಗೆ ಮುಂದಾಗಿರುವ ಜನ ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸ್ಟಂಟ್ ಮಾಡತ್ತಾರೆ.

ಸದ್ಯ ಇಲ್ಲೊಬ್ಬ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಹಾಗೂ ಫಾಲೋವರ್ಸ್ ಪಡೆಯಲು ಮಾಡಿದ್ದೇನು ಗೋತ್ತಾ?

ಈ ವಿಡಿಯೋನೊಮ್ಮೆ ಉತ್ತರ ಪ್ರದೇಶದಲ್ಲಿ ಚಲಿಸುವ ಕಾರಿನ ಮೇಲೆ ಯುವಕನೊಬ್ಬ ಪುಶ್-ಅಪ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಪುಶ್ ಅಪ್ ಮಾಡುತ್ತಿರುವ ಯುವಕನ ವಿಡಿಯೋವನ್ನು ಉತ್ತರ ಪ್ರದೇಶ ಪೊಲೀಸ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ.

‘ಕೆಲವು ಪುಶ್ ಅಪ್ ಗಳು ನಿಮ್ಮನ್ನು ಕಾನೂನಿ ಕಣ್ಣಿನ ಕೆಳಗೆ ಕೊಂಡೊಯ್ಯುತ್ತವೆ’ ಎಂದು ಬರೆದಿದ್ದಾರೆ.
ಆ ವಿಡಿಯೋದಲ್ಲಿ ಪುಶ್ ಅಪ್ ಮಾಡಿದ ವ್ಯಕ್ತಿಗೆ ನೀಡಿದ ದಂಡದ ರಸೀದಿಯನ್ನು ಹಾಕಲಾಗಿದೆ. ಅಲ್ಲದೆ ಆ ವ್ಯಕ್ತಿ ಪೊಲೀಸರಲ್ಲಿ ಕ್ಷಮೆ ಕೇಳಿರುವುದನ್ನೂ ವಿಡಿಯೋದಲ್ಲಿ ಹಾಕಿ ಪೋಸ್ಟ್ ಮಾಡಲಾಗಿದೆ.

ಸದ್ಯ ಪೊಲೀಸರು ವೈರಲ್ ಮಾಡಿರುವ ವಿಡಿಯೋ ಬಾರಿ ಸದ್ದು ಮಾಡುತ್ತಿದೆ. ಮಾತ್ರವಲ್ಲದೆ ಉತ್ತರ ಪ್ರದೇಶ ಪೊಲೀಸರ ಕೆಲಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

error: Content is protected !!