ಸೌದಿ ಅರೇಬಿಯಾ ವಿದ್ಯಾರ್ಥಿಗಳ ಕಲಿಕೆಗಾಗಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ - BC Suddi
ಸೌದಿ ಅರೇಬಿಯಾ ವಿದ್ಯಾರ್ಥಿಗಳ ಕಲಿಕೆಗಾಗಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ

ಸೌದಿ ಅರೇಬಿಯಾ ವಿದ್ಯಾರ್ಥಿಗಳ ಕಲಿಕೆಗಾಗಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ

ಸೌದಿ ಅರೇಬಿಯಾ: ಸೌದಿ ಅರೇಬಿಯಾ ಶಿಕ್ಷಣ ಕ್ಷೇತ್ರದಲ್ಲಿ ಪ್ರಿನ್ಸ್​ ಮೊಹಮ್ಮದ್​ ಬಿನ್​ ಸಲ್ಮಾನ್​ ಮಹತ್ವದ ಬದಲಾವಣೆಯನ್ನ ತಂದಿದ್ದು, ವಿಷನ್​ 2030 ಅಡಿಯಲ್ಲಿ ಪ್ರಿನ್ಸ್ ಮೊಹಮ್ಮದ್​ ಸೌದಿ ರಾಷ್ಟ್ರದ ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಜ್ಞಾನ ತುಂಬಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಸೌದಿ ಅರೇಬಿಯಾದ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನೂ ಕಲಿಯಲಿದ್ದು, ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಇರುವ ಜ್ಞಾನವನ್ನ ಹೆಚ್ಚಿಸಲು ಹಾಗೂ ಭಾರತೀಯ ಸಂಸ್ಕೃತಿಗಳಾದ ಯೋಗ ಹಾಗೂ ಆಯುರ್ವೇದದ ಮೇಲೂ ಗಮನ ನೀಡಲಾಗಿದೆ.

ಈ ಕುರಿತು ನೌಫ್​ ಅಲ್​ ಮರ್ವಾಲ್​ ಎಂಬವರು ಟ್ವೀಟ್ ಮಾಡಿದ್ದು, “ಸೌದಿ ಅರೇಬಿಯಾ ಪಠ್ಯ ಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನ ಸೇರಿಸೋದ್ರ ಜೊತೆಗೆ ವಿಷನ್​ 2030 ಭಾಗವಾಗಿ ಇಂಗ್ಲೀಷ್​ ಭಾಷೆ ಕಡ್ಡಾಯವಾಗಿ ಇದೆ” ಎಂದು ಮಾಹಿತಿ ನೀಡಿದ್ದಾರೆ. ಇನ್ನು ಸೌದಿ ಅರೇಬಿಯಾ ನ್ಯೂ ವಿಷನ್​ 2030 ಅಡಿಯಲ್ಲಿ ಹೊಸ ಪಠ್ಯಕ್ರಮಗಳು ಅಂತರ್ಗತ, ಉದಾರ ಹಾಗೂ ಸಂಸ್ಕೃತಿ ಬಗ್ಗೆ ಜ್ಞಾನವುಳ್ಳ ವಿದ್ಯಾರ್ಥಿಗಳನ್ನ ನಿರ್ಮಿಸುತ್ತದೆ” ಎಂದು ತಿಳಿಸಿದ್ದಾರೆ.

ಬೆಂಗಳೂರು: ವಾರಾಂತ್ಯದ ಕರ್ಫ್ಯೂನಿಂದಾಗಿ ಶನಿವಾರ, ಭಾನುವಾರ ಮೆಟ್ರೋ ಸಂಚಾರ ರದ್ದು