'ರಾಜ್ಯಪಾಲರೊಂದಿಗಿನ ಸಭೆ ಬಳಿಕ ಕರ್ನಾಟಕದಲ್ಲಿ ಕಠಿಣ ರೂಲ್ಸ್ ಜಾರಿಯಾಗಲಿದೆ' - ಆರ್. ಅಶೋಕ್ - BC Suddi
‘ರಾಜ್ಯಪಾಲರೊಂದಿಗಿನ ಸಭೆ ಬಳಿಕ ಕರ್ನಾಟಕದಲ್ಲಿ ಕಠಿಣ ರೂಲ್ಸ್ ಜಾರಿಯಾಗಲಿದೆ’ – ಆರ್. ಅಶೋಕ್

‘ರಾಜ್ಯಪಾಲರೊಂದಿಗಿನ ಸಭೆ ಬಳಿಕ ಕರ್ನಾಟಕದಲ್ಲಿ ಕಠಿಣ ರೂಲ್ಸ್ ಜಾರಿಯಾಗಲಿದೆ’ – ಆರ್. ಅಶೋಕ್

ಬೆಂಗಳೂರು: ರಾಜ್ಯಪಾಲರು ಇವತ್ತು ವರ್ಚುವಲ್ ಸಭೆ ಕರೆದಿದ್ದು, ಇದರಲ್ಲಿ ಮುಖ್ಯಮಂತ್ರಿ, ವಿಪಕ್ಷ ನಾಯಕರು ಅಧಿಕಾರಿಗಳು ಸಚಿವರಗಳು ಭಾಗಿಯಾಗಲಿದ್ದಾರೆ. ಕೊರೊನಾ ನಿರ್ವಹಣೆಗೆಗಾಗಿ ಎಲ್ಲಾ ರಾಜ್ಯಗಳಲ್ಲಿ ಗರ್ವನರ್ ಗಳು ಸಭೆ ಕರೆಸಿ ಮಾತನಾಡುತಿದ್ದಾರೆ. ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಲ್ಲ. ರಾಜ್ಯಪಾಲರ ಜತೆ ಸಭೆ ಮುಗಿದ ಬಳಿಕ ಖಂಡಿತ ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿಯಾಗಲಿದೆ ಎಂದು ಕಂದಾಯ ಸಚಿವ ಎಂದು ಆರ್. ಅಶೋಕ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕೊರೊನಾ ನಿರ್ವಹಣೆಗೆ ಗವರ್ನರ್ ಕೂಡ ಭಾಗಿಯಾಗಬೇಕು ಅಂತ ಎಲ್ಲಾ ರಾಜ್ಯದ ರಾಜ್ಯಪಾಲರಿಗೆ ಕೇಂದ್ರ ಸರ್ಕಾರದ ಸೂಚನೆ‌ ನೀಡಿದ್ದು, ಹಾಗಾಗೀ ಇದಕ್ಕೆ ಕಾಂಗ್ರೆಸ್ ನವರು ಯಾವುದೇ ಅರ್ಥ ಕಲ್ಪಿಸುವುದು ಬೇಡ” ಎಂದರು.

ಇನ್ನು ಹೊಸ ನಿಯಮಗಳು ಇಂದಿನಿಂದಲೇ ಜಾರಿಯಾಗಲಿದ್ದು, ತೇಜಸ್ವಿಸೂರ್ಯ ಕೇಂದ್ರ ಸಚಿವರ ಜೊತೆ ಮಾತ ನಾಡಿದ್ದಾರೆ. ಎಲ್ಲೆಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ದಾಸ್ತಾನಿಗೆ ಅವಕಾಶವಿದೆವೋ ಅದನ್ನು ಕೊಡಿಸಲಾಗುವುದು. ಜೊತೆಗೆ ಸಿಲಿಂಡರ್ ಮೂಲಕವೇ ಆಗಬೇಕಾದ ಕಡೆಗೆ ಖಾಲಿ ಸಿಲಿಂಡರ್ ಗಳನ್ನು ವಿತರಿಸಿ ಆ ಮೂಲಕವೂ ದಾಸ್ತಾನಿಗೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದ್ದಾರೆ