ಕಾಂಗ್ರೆಸ್‌‌ನಿಂದ ರಾಜ್ಯಮಟ್ಟದ ಕೊರೊನ ಸೆಂಟರ್ ಮಾಡುತ್ತೇವೆ : ಡಿಕೆಶಿ - BC Suddi
ಕಾಂಗ್ರೆಸ್‌‌ನಿಂದ ರಾಜ್ಯಮಟ್ಟದ ಕೊರೊನ ಸೆಂಟರ್ ಮಾಡುತ್ತೇವೆ :  ಡಿಕೆಶಿ

ಕಾಂಗ್ರೆಸ್‌‌ನಿಂದ ರಾಜ್ಯಮಟ್ಟದ ಕೊರೊನ ಸೆಂಟರ್ ಮಾಡುತ್ತೇವೆ : ಡಿಕೆಶಿ

ಬೆಂಗಳೂರು: “ಕಾಂಗ್ರೆಸ್‌‌ನಿಂದ ರಾಜ್ಯಮಟ್ಟದ ಕೊರೊನ ಸೆಂಟರ್ ಮಾಡಲಿದ್ದೇವೆ. ಖಾಸಗಿ ಆಸ್ಪತ್ರೆಗಳಿಗೆ ಡ್ರಗ್ ,ಔಷದಿ ಸರಬರಾಜು ಮಾಡಲಾಗುತ್ತಿಲ್ಲ. ಅವರ ಸಹಾಯಕ್ಕೂ ಕಾಂಗ್ರೆಸ್ ನಿಲ್ಲಲಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ಕೊರೊನಾ ಸಮಯದಲ್ಲಿ ಯಾವ ರೀತಿ ಜವಬ್ದಾರಿ ನಿಭಾಯಿಸಬೇಕು, ಆಸ್ಪತ್ರೆಗಳ ಮಾಹಿತಿ ಹೇಗೆ ಪಡೆಯಬೇಕು, ಸಾಮಾನ್ಯ ಜನರಿಗೆ ಹೇಗೆ ಸಹಾಯ ಮಾಡಬೇಕೆಂಬುದನ್ನು ಕಾಂಗ್ರೆಸ್ ಪಕ್ಷ ನಿಭಾಯಿಬೇಕಾದ ಜವಬ್ದಾರಿ ಬಗ್ಗೆ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಸಲಹೆ ನೀಡಿದ್ದಾರೆ” ಎಂದರು.

ಇನ್ನು ಕರ್ನಾಟಕದಲ್ಲಿ ಒಮ್ಮೆಲೆ ಲಾಕ್‌ಡೌನ್ ಘೋಷಣೆ ಮಾಡಿದ್ದು, ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗಲಿದ್ದು, ಜನರಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕು. ಪ್ಯಾಕೇಜ್ ಕೊಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ” ಎಂದಿದ್ದಾರೆ.

ಸರ್ಕಾರಕ್ಕೆ ನಾಚಿಕೆಯಾಗಬೇಕು, ಏಳು ಕೆಜಿ ಅಕ್ಕಿ ಕೊಡುತ್ತಿದ್ದರು, ಅದನ್ನು ಎರಡು ಕೆಜಿ ಮಾಡಿದ್ದಾರೆ. ಇವರೇನು ಇವರ ಕೈಯಿಂದ ಕೊಡುತ್ತಿದ್ದಾರೆಯೇ? ಇದಕ್ಕಿಂತ ದುರಂತ ‌ಮತ್ತೊಂದಿಲ್ಲ ಎಂದು ಹೇಳಿದ್ದಾರೆ.

ಸಚಿವರ, ಶಾಸಕರ, ಟಿಎಡಿಎ ಎಲ್ಲಾ ವೇತನ ಕಟ್ ಮಾಡಿ: ಸಚಿವ ಎಂಟಿಬಿ ನಾಗರಾಜ್