ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸದರೆ ಉತ್ತಮ: ಎಚ್‌ಡಿ ಕುಮಾರಸ್ವಾಮಿ - BC Suddi
ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸದರೆ ಉತ್ತಮ: ಎಚ್‌ಡಿ ಕುಮಾರಸ್ವಾಮಿ

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸದರೆ ಉತ್ತಮ: ಎಚ್‌ಡಿ ಕುಮಾರಸ್ವಾಮಿ

ಬೆಂಗಳೂರು : “ಕರ್ನಾಟಕ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡಿದರೆ ಉತ್ತಮ” ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, “ದೇಶ ಹಾಗೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸದರೆ ಮಾತ್ರ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯ” ಎಂದರು.

“ರಾಜ್ಯದಲ್ಲಿ ಮೊದಲು 200 ರಿಂದ 300 ಬರುತ್ತಿದ್ದ ಪ್ರಕರಣಗಳ ಸಂಖ್ಯೆ ಸಾವಿರದ ಹತ್ತಿರ ಬಂದು ನಿಂತಿದ್ದು, ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದರೂ ಬರಬಹುದು” ಎಂದು ಹೇಳಿದ್ದಾರೆ. “ನಾನು ಪ್ರತಿನಿತ್ಯ ೬೦೦ ಕಿ.ಮೀ ಸಂಚರಿಸುತ್ತಿದ್ದೇನೆ, ಹೋದ ಕಡೆಗಳಲ್ಲಿ ಜನರು ಮುತ್ತಿಕೊಳ್ಳುತ್ತಾರೆ, ತಮ್ಮ ಸಮಸ್ಯೆ ಹೇಳಿಕೊಳ್ಳಲು ಬರುತ್ತಾರೆ ಹಾಗಾಗಿ ಅವರನ್ನು ತಪ್ಪಿಸುವುದು ಕಷ್ಟ. ಹಾಗಾಗಿ ಕನಿಷ್ಠ ಪಕ್ಷ ಮಾಸ್ಕ್ ಆದರೂ ಧರಿಸಿ ಎಂದು ಹೇಳಿದ್ದೇನೆ” ಎಂದು ಹೇಳಿದ್ದಾರೆ.

 

error: Content is protected !!