ರಾಜ್ಯಗಳ ನಡುವಿನ ಗಡಿ ಪ್ರವೇಶ ಮುಚ್ಚುವ ನಿರ್ಬಂಧ ವಾಪಾಸ್' :ಹೈಕೋಟ್‌‌ಗೆ ರಾಜ್ಯ ಸರ್ಕಾರ - BC Suddi
ರಾಜ್ಯಗಳ ನಡುವಿನ ಗಡಿ ಪ್ರವೇಶ ಮುಚ್ಚುವ ನಿರ್ಬಂಧ ವಾಪಾಸ್’ :ಹೈಕೋಟ್‌‌ಗೆ ರಾಜ್ಯ ಸರ್ಕಾರ

ರಾಜ್ಯಗಳ ನಡುವಿನ ಗಡಿ ಪ್ರವೇಶ ಮುಚ್ಚುವ ನಿರ್ಬಂಧ ವಾಪಾಸ್’ :ಹೈಕೋಟ್‌‌ಗೆ ರಾಜ್ಯ ಸರ್ಕಾರ

ಬೆಂಗಳೂರು: “ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಗಡಿ ಪ್ರವೇಶಗಳನ್ನು ಮುಚ್ಚುವ ವಿಚಾರದ ಬಗ್ಗೆ ಜಿಲ್ಲಾಡಳಿತಗಳಿಗೆ ನೀಡಿದ ಅಧಿಕಾರವನ್ನು ವಾಪಾಸ್ಸು ಪಡೆದುಕೊಳ್ಳಲಾಗುವುದು” ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿದೆ. ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಕಾಸರಗೋಡಿನ ವಕೀಲ ಬಿ.ಸುಬ್ಬಯ್ಯ ರೈ ಅವರು, ದ.ಕ ಜಿಲ್ಲಾಧಿಕಾರಿ ಕೇರಳ ಗಡಿ ನಿರ್ಬಂಧಿಸಿದ್ದ ಕ್ರಮದ ಬಗ್ಗೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿತು.

 

“ಪ್ರಯಾಣಿಕರ ಹಾಗೂ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಬಾರದು ಎಂದು ತನ್ನ ಹೊಸ ನಿಯಮಾವಳಿಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೂ, ಇದಕ್ಕೆ ರಾಜ್ಯ ಸರ್ಕಾರ ನಿರ್ಬಂಧ ಹೇರುತ್ತಿದೆ. ಸಂಚಾರಕ್ಕೆ ಸ್ಥಳೀಯ ಆಡಳಿತ ಸಂಸ್ಥೆಗಳ ಮುಖೇನ ನಿರ್ಬಂಧ ಹೇರಲು ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಅರ್ಜಿದಾರರ ಪರ ವಕೀಲ ಕೆ.ರವಿಶಂಕರ್‌‌‌ ವಾದಿಸಿದ್ದಾರೆ.

“ಇದಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಗಡಿ ಪ್ರವೇಶಗಳನ್ನು ಮುಚ್ಚುವ ವಿಚಾರದ ಬಗ್ಗೆ ಜಿಲ್ಲಾಡಳಿತಗಳಿಗೆ ನೀಡಿದ ಅಧಿಕಾರವನ್ನು ವಾಪಾಸ್ಸು ಪಡೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಈ ಬಗ್ಗೆ ಲಿಖಿತ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಎ.1ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಕೇಂದ್ರದ ಹೊಸ ನಿಯಾಮವಳಿಗಳ ಪ್ರಕಾರ ರಾಜ್ಯ ಗಡಿ ಪ್ರವೇಶಗಳನ್ನು ಮುಚ್ಚುವಂತಿಲ್ಲ” ಎಂದು ಕೇಂದ್ರ ಸರ್ಕಾರದ ಪರ ವಾದಿಸಿದ ವಕೀಲ ಎಂ.ಎನ್‌‌‌ ಕುಮಾರ್‌ ತಿಳಿಸಿದ್ದಾರೆ.

error: Content is protected !!