ಮಂಗಳೂರು: ನಂದಿನಿ ಉತ್ಸವದಲ್ಲಿ ವೇದಿಕೆ ಕುಸಿತ - ಸಚಿವ ಸಿ.ಪಿ.ಯೋಗೇಶ್ವರ್‌ ಸ್ವಲ್ಪದರಲ್ಲೇ ಪಾರು - BC Suddi
ಮಂಗಳೂರು: ನಂದಿನಿ ಉತ್ಸವದಲ್ಲಿ ವೇದಿಕೆ ಕುಸಿತ – ಸಚಿವ ಸಿ.ಪಿ.ಯೋಗೇಶ್ವರ್‌ ಸ್ವಲ್ಪದರಲ್ಲೇ ಪಾರು

ಮಂಗಳೂರು: ನಂದಿನಿ ಉತ್ಸವದಲ್ಲಿ ವೇದಿಕೆ ಕುಸಿತ – ಸಚಿವ ಸಿ.ಪಿ.ಯೋಗೇಶ್ವರ್‌ ಸ್ವಲ್ಪದರಲ್ಲೇ ಪಾರು

ಮಂಗಳೂರು: ಉತ್ಸವವೊಂದರ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆ ದಿಢೀರ್ ಕುಸಿದಿದ್ದು, ರಾಜ್ಯದ ಸಚಿವರು ಹಾಗೂ ಇತರರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಈ ವೇದಿಕೆಯನ್ನು ನದಿಯ ಪಕ್ಕದಲ್ಲೇ ಹಾಕಲಾಗಿದ್ದರಿಂದ ಸ್ವಲ್ಪ ಹೆಚ್ಚೂಕಡಿಮೆ ಆಗಿದ್ದರೂ ದುರಂತ ಸಂಭವಿಸಿರಬಹುದಾದ ಸಾಧ್ಯತೆ ಇತ್ತು.

ನಗರದ ಸಸಿಹಿತ್ಲುವಿನಲ್ಲಿ‌ ನಡೆದ ನಂದಿನಿ ಉತ್ಸವ ಕಾರ್ಯಕ್ರಮದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಸಹಿತ ಎಲ್ಲಾ ಅತಿಥಿಗಳು ಗಂಗಾರತಿ ಮಾಡಲು ವೇದಿಕೆ ಏರಿದಾಗ ಜಗ್ಗಿದ ಘಟನೆ ನಡೆದಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಬಳಿಕ ಎಲ್ಲರೂ ಕೆಳಗೆ ನಿಂತು ಗಂಗಾರತಿ ಮಾಡಿದ ಘಟನೆ ನಡೆದಿದೆ.

ಸಚಿವ ಸಿ.ಪಿ.ಯೋಗೀಶ್ವರ್​ ಉದ್ಘಾಟನೆಗೆ ಮುಂದಾದಾಗ ಅವರೊಂದಿಗೆ ಹೆಚ್ಚು ಜನರು ವೇದಿಕೆ ಮೇಲೆ ನಿಂತಿದ್ದರಿಂದ ಅದು ಕುಸಿದಿದೆ. ಸ್ಟೇಜ್ ನದಿ ಭಾಗಕ್ಕಿಂತ ಹಿಂಬದಿಗೆ ಮುರಿದು ಬಿದ್ದ ಪರಿಣಾಮ ಸಚಿವರು ಸೇರಿ ಇತರ ಗಣ್ಯರು ನದಿಗೆ ಬೀಳುವುದರಿಂದ ಪಾರಾಗಿದ್ದಾರೆ. ಈ ಸಂದರ್ಭ ಕೆಲಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತು.

error: Content is protected !!