SSLC ಪರೀಕ್ಷೆಯಲ್ಲಿ 40% ಸರಳ ಪ್ರಶ್ನೆ : ವಿದ್ಯಾರ್ಥಿಗಳು ಖುಷ್ - BC Suddi
SSLC ಪರೀಕ್ಷೆಯಲ್ಲಿ 40% ಸರಳ ಪ್ರಶ್ನೆ : ವಿದ್ಯಾರ್ಥಿಗಳು ಖುಷ್

SSLC ಪರೀಕ್ಷೆಯಲ್ಲಿ 40% ಸರಳ ಪ್ರಶ್ನೆ : ವಿದ್ಯಾರ್ಥಿಗಳು ಖುಷ್

ಬೆಂಗಳೂರು: ಕೊರೊನಾ ತಂದ ಕಿರಿಕಿರಿ ಅಷ್ಟಿಷ್ಟಲ್ಲ ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ತೊಂದರೆ ಮಾಡಿದೆ. ಹಾಗಾಗಿ ಆನ್ ಲೈನ್ ಶಿಕ್ಷಣ, ವಿದ್ಯಾಗಮದಂತಹ ಯೋಜನೆಗಳು ಜಾರಿಯಾದವು. ಸದ್ಯ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಿಲ್ಲವಾದ್ದರಿಂದ ಶಿಕ್ಷಣ ಇಲಾಖೆ 40 ಸರಳ ಪ್ರಶ್ನೆ ಕೇಳುವ ಚಿಂತನೆ ಮಾಡಿದೆ.

ಇದರಿಂದಾಗಿ ವಿದ್ಯಾರ್ಥಿಗಳು ಆತಂಕದ ದೂರವಾಗಿದೆ. ಈ ಬಾರಿ ಕಷ್ಟದ ಪ್ರಶ್ನೆಗಳ ಬದಲಿಗೆ ಸುಲಭವಾದ ಮತ್ತು ನೇರ ಪ್ರಶ್ನೆಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷೆ ವಿನ್ಯಾಸ ಬದಲಿಸಿ ಸುಲಭಗೊಳಿಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ.

ಶೇಕಡ 40 ರಷ್ಟು ಸರಳ ಪ್ರಶ್ನೆಗಳನ್ನು ಕೇಳಲಾಗುವುದು. ಲಾಕ್ ಡೌನ್ ನಿಂದಾಗಿ ಶಾಲೆಗಳು ಸರಿಯಾಗಿ ನಡೆಯದ ಕಾರಣ ಶೇ. 30 ರಷ್ಟು ಪಠ್ಯ ಕಡಿತಗೊಳಿಸಿದ್ದು, ಶೇ. 5 ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರಲಿದ್ದು, ಉಳಿದಂತೆ ಶೇ. 40 ರಷ್ಟು ಸರಳ ಪ್ರಶ್ನೆಗಳು ಶೇ. 20 ರಷ್ಟು ಸ್ವಲ್ಪ ಕಷ್ಟಕರ ಪ್ರಶ್ನೆಗಳು ಇರಲಿವೆ.

 

ಹೈದರಾಬಾದ್: ಕ್ಲಾಸ್ ಮೇಟ್ ನಂಬರ್ ಪಡೆದವ ಮಾಡಿದ್ದೇನು ಗೊತ್ತಾ?

error: Content is protected !!