ನನ್ನಿಂದ ಏನಾದರು ರೈತರು ಮತ್ತು ಫಲಾನುಭವಿಗಳ ತೊಂದರೆ ಆಗಿದ್ದರೆ ಅವರಿಗೆ ಕ್ಷಮೆ ಕೇಳುತೇನೆ : ಸಚಿವ ಉಮೇಶ ಕತ್ತಿ - BC Suddi
ನನ್ನಿಂದ ಏನಾದರು ರೈತರು ಮತ್ತು ಫಲಾನುಭವಿಗಳ ತೊಂದರೆ ಆಗಿದ್ದರೆ ಅವರಿಗೆ ಕ್ಷಮೆ ಕೇಳುತೇನೆ : ಸಚಿವ ಉಮೇಶ ಕತ್ತಿ

ನನ್ನಿಂದ ಏನಾದರು ರೈತರು ಮತ್ತು ಫಲಾನುಭವಿಗಳ ತೊಂದರೆ ಆಗಿದ್ದರೆ ಅವರಿಗೆ ಕ್ಷಮೆ ಕೇಳುತೇನೆ : ಸಚಿವ ಉಮೇಶ ಕತ್ತಿ

ಬೆಳಗಾವಿ: ಬಡವರು ಬದುಕೊದಕ್ಕಿಂತ ಸಾಯೋದು ಮೇಲು ಎಂದು ಉಡಾಫೆ ಹೇಳಿಕೆ ನೀಡಿದ್ದ ಸಚಿವ ಉಮೇಶ ಕತ್ತಿ ಈಗ ರೈತರು ಮತ್ತು ಫಲಾನುಭವಿಗಳ ಕ್ಷಮೆ ಕೇಳಿದ್ದಾರೆ. ಇಂದು ಬೆಳಗಾವಿಯ ಜಿಲ್ಲಾ ಪಂಚಾಯತನಲ್ಲಿ ನಡೆದ ಕೋವಿಡ್ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನಿಂದ ಏನಾದರು ರೈತರು ಮತ್ತು ಫಲಾನುಭವಿಗಳ ತೊಂದರೆ ಆಗಿದ್ದರೆ ಅವರಿಗೆ ಕ್ಷಮೆ ಕೇಳುತೇನೆ  ಎಂದು ಹೇಳಿದ್ದಾರೆ. 

ಸಂಜೆ ಒಳಗೆ ರಾಜೀನಾಮೆ ನೀಡದಿದ್ರೆ ಶವಯಾತ್ರೆ ಮಾಡುತ್ತೆವೆ ಡಿಕೆಸಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಉಮೇಶ ಕತ್ತಿ ಅವರು, ನನ್ನ ರಾಜೀನಾಮೆ ಕೇಳಲು ಡಿ.ಕೆ.ಶಿವಕುಮಾರ್ ಯಾರು, ಡಿಕೆಶಿ ಕಾಂಗ್ರೆಸ್ ಶವಯಾತ್ರೆ ಮಾಡಿ, ಶವವನ್ನು  ಸಿದ್ದರಾಮಯ್ಯ ಮನೆ ಮುಂದೆ ಹೂಳಲಿ ಎಂದು ಹೇಳಿದ ಅವರು ಡಿಕೆಶಿ ರಾಜಕೀಯ ಮಾಡೋದಾದ್ರೆ ಮಾಡಲಿ ಎಂದು ನಾ ಯಾವುದಕ್ಕೂ ಕೇರೇ ಮಾಡಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.‌

ಕತ್ತಿ ಅವರು ನೀಡಿದ ಹೇಳಿಕೆಯಿಂದ ಸರ್ಕಾರಕ್ಕೆ ಮುಜಗರ ಉಂಟಾಗಿತ್ತು.‌ ಇದು ವಿರೋಧ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿ ಆಗಿತ್ತು.‌ ಕಾಂಗ್ರೆಸ್ ಉಮೇಶ್ ಕತ್ತಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಆಕ್ಸಿಜನ್ ಸೋರಿಕೆ ಪ್ರಕರಣ : ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಪಾರಾದ 14 ರೋಗಿಗಳು