ರಾಜ್ಯದಲ್ಲಿ ಕೆಲವು ನಿರ್ಬಂಧ ಮತ್ತು ನೈಟ್ ಕರ್ಫ್ಯೂ ಜಾರಿಮಾಡಲಾಗಿದಿಯೇ ಹೊರತು ಇದು ಲಾಕ್ ಡೌನ್ ಅಲ್ಲ : ಬೊಮ್ಮಾಯಿ - BC Suddi
ರಾಜ್ಯದಲ್ಲಿ ಕೆಲವು ನಿರ್ಬಂಧ ಮತ್ತು ನೈಟ್ ಕರ್ಫ್ಯೂ ಜಾರಿಮಾಡಲಾಗಿದಿಯೇ ಹೊರತು ಇದು ಲಾಕ್ ಡೌನ್ ಅಲ್ಲ : ಬೊಮ್ಮಾಯಿ

ರಾಜ್ಯದಲ್ಲಿ ಕೆಲವು ನಿರ್ಬಂಧ ಮತ್ತು ನೈಟ್ ಕರ್ಫ್ಯೂ ಜಾರಿಮಾಡಲಾಗಿದಿಯೇ ಹೊರತು ಇದು ಲಾಕ್ ಡೌನ್ ಅಲ್ಲ : ಬೊಮ್ಮಾಯಿ

ಹಾವೇರಿ : ಡೆಡ್ಲಿ ಸೋಂಕಿಗೆ ಎಲ್ಲರೂ ಮನೆಯಲ್ಲಿಯೇ ಇರಿ ಕೋವಿಡ್ ನಿಯಮ ಪಾಲಿಸಿ ಎಂದು ರಾಜ್ಯದಲ್ಲಿ ಕೆಲವು ನಿರ್ಬಂಧ ಮತ್ತು ನೈಟ್ ಕರ್ಫ್ಯೂ ಜಾರಿಮಾಡಲಾಗಿದಿಯೇ ಹೊರತು ಇದು ಲಾಕ್ ಡೌನ್ ಅಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೋವಿಡ್ ಸ್ಥಿತಿಗತಿ ಕುರಿತು ನಗರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಲಾಕ್ ಡೌನ್ ಬಗ್ಗೆ ಈಗಾಗಲೆ ಸಿಎಂ ಹೇಳಿದ್ದಾರೆ. ಇದು ಲಾಕ್ ಡೌನ್ ಅಲ್ಲ, ಕೆಲವು ನಿರ್ಬಂಧಗಳ ಜೊತೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಕಳೆದ ಮೂರು ದಿನಗಳಿಂದ ಯಾವ ನಿರ್ಬಂಧಗಳಿವೆಯೋ ಅವುಗಳು ಎರಡು ವಾರಕ್ಕಿವೆ ಎಂದು ಹೇಳಿದ್ದಾರೆ.

ಎರಡು ವಾರ ಮುಗಿಯೋ ಪೂರ್ವದಲ್ಲಿ ರಾಜ್ಯಮಟ್ಟದ ಕೋವಿಡ್ ತಜ್ಞರ ಸಮಿತಿ ಹಾಗೂ ಟಾಸ್ಕ್ ಫೋರ್ಸ್ ನವರು ಅವಲೋಕನ ಮಾಡುತ್ತಾರೆ. ಕೊರೊನಾ ಕಡಿಮೆ ಆಗಿದೆಯೋ ಇಲ್ಲವೋ ಎಂಬುದನ್ನು ಅವಲೋಕನ ಮಾಡುತ್ತಾರೆ. ಅದರ ಆಧಾರದ ಮೇಲೆ ನಿರ್ಬಂಧಗಳ ವಿಸ್ತರಣೆ ಬಗ್ಗೆ ಟಾಸ್ಕ್ ಫೋರ್ಸ್ ಹಾಗೂ ತಜ್ಞರ ಸಮಿತಿ ನಿರ್ಧಾರ ಮಾಡುತ್ತದೆ ಎಂದರು.

ತಜ್ಞರು ತಮ್ಮ ನಿರ್ಧಾರ ತಿಳಿಸುವ ವರೆಗೆ ಈಗಿರುವ ನಿರ್ಬಂಧಗಳು ಇರುತ್ತವೆ. ಜನರು ಸಹ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು ಎಂದು ಹೋಂ ಮಿನಿಸ್ಟರ್ ಮನವಿ ಮಾಡಿದ್ದಾರೆ.

ಡೆಡ್ಲಿ ಸೋಂಕು : ಹಸೆಮಣೆ ಏರಬೇಕಿದ್ದ ವರ ಕೊರೊನಾಗೆ ಬಲಿ