ಕಠಿಣ ಕರ್ಫ್ಯೂ ವೇಳೆ ಕೆಲ ಸೇವೆಗಳಿಗೆ ಅನುಮತಿ : ಕಂಪನಿ ಪಾಸ್ ಇದ್ದವರ ಸಂಚಾರಕ್ಕೆ ಅನುಮತಿ: ಬೊಮ್ಮಾಯಿ - BC Suddi
ಕಠಿಣ ಕರ್ಫ್ಯೂ ವೇಳೆ ಕೆಲ ಸೇವೆಗಳಿಗೆ ಅನುಮತಿ : ಕಂಪನಿ ಪಾಸ್ ಇದ್ದವರ ಸಂಚಾರಕ್ಕೆ ಅನುಮತಿ: ಬೊಮ್ಮಾಯಿ

ಕಠಿಣ ಕರ್ಫ್ಯೂ ವೇಳೆ ಕೆಲ ಸೇವೆಗಳಿಗೆ ಅನುಮತಿ : ಕಂಪನಿ ಪಾಸ್ ಇದ್ದವರ ಸಂಚಾರಕ್ಕೆ ಅನುಮತಿ: ಬೊಮ್ಮಾಯಿ

ಬೆಂಗಳೂರು: ಕೋವಿಡ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದು, ಇದರ ಮೇಲುಸ್ತುವಾರಿಗೆ ಐವರು ಎಡಿಜಿಪಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಠಿಣ ಕರ್ಫ್ಯೂ ವೇಳೆ ಕೆಲ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಹಾಗಾಗಿ ಅವರು ಸಂಚಾರ ನಡೆಸುತ್ತಿದ್ದಾರೆ, ಹಾಗಾಗಿ ರಸ್ತೆಯಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಿದೆ. ಇನ್ಮುಂದೆ ಕಂಪನಿ ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪಾಸ್ ಇಲ್ಲದವರ ಓಡಾಟಕ್ಕೆ ಬ್ರೇಕ್ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ..!