'ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ, ಇದೇ ಈ ಸರ್ಕಾರದ ಸಾಧನೆ' :  ಕಾಂಗ್ರೆಸ್ - BC Suddi
‘ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ, ಇದೇ ಈ ಸರ್ಕಾರದ ಸಾಧನೆ’ :  ಕಾಂಗ್ರೆಸ್

‘ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ, ಇದೇ ಈ ಸರ್ಕಾರದ ಸಾಧನೆ’ :  ಕಾಂಗ್ರೆಸ್

ಬೆಂಗಳೂರು: ’ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ, ಇದೇ ಈ ಸರ್ಕಾರದ ಸಾಧನೆ ’ಎಂದು ಕಾಂಗ್ರೆಸ್ ಪಕ್ಷವೂ ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಟೀಕಿಸಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ” ‘ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ’ ಇದೇ ಈ ಸರ್ಕಾರದ ಸಾಧನೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಹಸಿವು ಕೊಲ್ಲುತ್ತಿದೆ. 

ಕೂಡಲೇ ಅನ್ನಭಾಗ್ಯದ ಅಕ್ಕಿ 10 ಕೆಜಿಗೆ ಏರಿಸಿ, ಇಲ್ಲದೆ ಹೋದಲ್ಲಿ ಸೋಂಕಿತರ ಸಾವುಗಳೊಂದಿಗೆ ಹಸಿದವರ ಸಾವೂ ಸೇರಲಿದೆ, ನಿಮ್ಮ ಮಸಣಗಳು ಸಾಲುವುದಿಲ್ಲ. ಈ ಮನಕಲುಕುವ ಘಟನೆ ಕಂಡೂ ಸುಮ್ಮನಿದ್ದರೆ ಕ್ಷಮೆ ಇರುವುದಿಲ್ಲ ಎಂದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದೆ.

ಸಚಿವ ಸುಧಾಕರ್ ಅವರೇ, ಬೇರೆಯವರ ಹೆಂಡತಿಯರ ಲೆಕ್ಕವನ್ನು ಚೆನ್ನಾಗಿ ಹಾಕುವ ನೀವು ಕರೋನಾ ಸಾವಿನ ಲೆಕ್ಕದಲ್ಲಿ ತಪ್ಪುವುದೇಕೆ!? ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ, ಸ್ಮಶಾನಗಳಲ್ಲಿ ಶವಗಳ ಸಾಲು, ಮಾಧ್ಯಮಗಳಲ್ಲಿ ಸಾವಿರ ಸಾವಿನ ಸುದ್ದಿಗಳು, ಆದರೆ ಸರ್ಕಾರ ವೈಫಲ್ಯ ಮುಚ್ಚಲು ಸಾವಿನ ಲೆಕ್ಕ ಮುಚ್ಚಿಡುತ್ತಿದೆ. ಮೋದಿಯ ಚಾಳಿ ಮುಂದುವರೆಸಿದೆ ಎಂದು ಪ್ರಶ್ನಿಸಿದೆ.

ಸಚಿವ ಆರ್ ಅಶೋಕ್ ಅವರೇ, 20% ಸೋಂಕಿತರು ತಲೆ ಮರೆಸಿಕೊಂಡಿದ್ದಾರೆಂದರೆ ಅದು ಟ್ರೇಸ್, ಟ್ರ್ಯಾಕ್,ಟ್ರೀಟ್‌ನಲ್ಲಿ ವಿಫಲಗೊಂಡ ನಿಮ್ಮ ಸರ್ಕಾರದ ಅಯೋಗ್ಯತನಕ್ಕೆ ಕನ್ನಡಿ. ಜನತೆ ನಿಮ್ಮ ಸರ್ಕಾರದ ಮೇಲೆ, ನಿಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಕ್ಕೆ ಸಾಕ್ಷಿ. ಸರ್ಕಾರದ ಕೈಗೆ ಸಿಕ್ಕರೆ ಸಾವೇ ಗತಿ ಎಂದು ಜನತೆ ಅರ್ಥೈಸಿಕೊಂಡಂತಿದೆ ಎಂದು ಕಿಡಿಕಾರಿದೆ.

ಮೇ.1ರಂದು 18 ವರ್ಷ ಮೇಲ್ಪಟ್ಟವರು ಲಸಿಕೆಗಾಗಿ  ಆಸ್ಪತ್ರೆಗೆ ಹೋಗಬೇಡಿ : ಮುಂದಿನ ದಿನಾಂಕ ತಿಳಿಸುತ್ತೇವೆ’ – ಡಾ. ಸುಧಾಕರ್