ಕೊಡಗು:ಜೀಪಿನ  ಅಡಿಯಲ್ಲಿ ಅವಿತು ಕುಳಿತಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.

ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ದಬ್ಬಡ್ಕ ವಿಜಯ್  ಎಂಬವರ ಲೈನ್ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಜೀಪಿನ ಅಡಿಯಲ್ಲಿ ಅವಿತಿದ್ದ ಕಾಳಿಂಗ ಹೊರ ಬರಲು ಪ್ರಯತ್ನಿಸುತ್ತಿತ್ತು,ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು,ಬಳಿಕ ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಪ್ರಜ್ವಲ್ ರಕ್ಷಿಸಿದ್ದು ಬಳಿಕ ಸುರಕ್ಷಿತವಾಗಿ ದೂರದ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.