ಕೆಲಸದ ಒತ್ತಡ - ಕರ್ತವ್ಯನಿರತ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ನರ್ಸ್‌ - BC Suddi
ಕೆಲಸದ ಒತ್ತಡ – ಕರ್ತವ್ಯನಿರತ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ನರ್ಸ್‌

ಕೆಲಸದ ಒತ್ತಡ – ಕರ್ತವ್ಯನಿರತ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ನರ್ಸ್‌

ಉತ್ತರಪ್ರದೇಶ: ನರ್ಸ್‌‌ ಒಬ್ಬರು ಕರ್ತವ್ಯನಿರತ ವೈದ್ಯರಿಗೆ ಕಪಾಳಮೋಕ್ಷ ಮಾಡಿದ ಘಟನೆ ಉತ್ತರಪ್ರದೇಶದ ರಾಂಪುರ ಆಸ್ಪತ್ರೆಯಲ್ಲಿ ನಡೆದಿದೆ.

ರೋಗಿಗಳಿಂದ ತುಂಬಿದ್ದ ವೈದ್ಯರಿದ್ದ ಕೊಠಡಿಗೆ ಬಂದ ನರ್ಸ್ ಮೃತರೋರ್ವರ ಮರಣ ಪ್ರಮಾಣಪತ್ರ ಕೊಡುವಂತೆ ಕೇಳಿದ್ದರು ಎಂದು ವರದಿ ತಿಳಿಸಿದೆ.

ಈ ಸಂದರ್ಭ ನರ್ಸ್‌‌ ಹಾಗೂ ವೈದ್ಯರ ನಡುವೆ ವಾಗ್ವಾದ ಆರಂಭವಾಗಿದೆ. ಈ ವೇಳೆ ನರ್ಸ್ ವೈದ್ಯರ ಕಪಾಳಕ್ಕೆ ಹೊಡೆದಿದ್ದು, ವೈದ್ಯರೂ ಕೂಡಾ ನರ್ಸ್‌ಗೆ ಹೊಡೆದಿದ್ದಾರೆ. ಈ ಘಟನೆ ಕ್ಯಾಮಾರದಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಂಪುರ ಮ್ಯಾಜಿಸ್ಟ್ರೇಟ್‌‌ ರಾಮ್‌ ಜಿ ಮಿಶ್ರಾ, ವೈದ್ಯರು ಹಾಗೂ ನರ್ಸ್‌ ಜೊತೆ ನಾನು ಮಾತನಾಡಿದ್ದೇನೆ. ಕೆಲಸದ ಒತ್ತಡದ ಪರಿಣಾಮ ಈ ರೀತಿ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಘಟನೆ ನಡೆದರೂ ಕೂಡ ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ನ್ಯಾಯಾಧಿಕಾರಿ ರವೀಂದ್ರ ಕುಮಾರ್ ಆದೇಶಿಸಿದ್ದಾರೆ.