ಜಾರಕಿಹೊಳಿಗೆ ಕಾಲ್ ಲಿಸ್ಟ್ ತೋರಿಸಿ ಶಾಕ್ ನೀಡಿದ ಎಸ್​ಐಟಿ - BC Suddi
ಜಾರಕಿಹೊಳಿಗೆ ಕಾಲ್ ಲಿಸ್ಟ್ ತೋರಿಸಿ ಶಾಕ್ ನೀಡಿದ ಎಸ್​ಐಟಿ

ಜಾರಕಿಹೊಳಿಗೆ ಕಾಲ್ ಲಿಸ್ಟ್ ತೋರಿಸಿ ಶಾಕ್ ನೀಡಿದ ಎಸ್​ಐಟಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳೆ ಅವರು ಎನ್ನಲಾಗಿದ್ದ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ರಮೇಶ್​ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಂಶ ಹೊರಗೆಡವಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಸತತ ನಾಲ್ಕು ಗಂಟೆಗಳ ಕಾಲ ರಮೇಶ್​ ಜಾರಕಿಹೊಳಿ ಅವರನ್ನು ವಿಚಾರಿಸಿದಾಗ ಬಹುತೇಕ ಪ್ರಶ್ನೆಗಳಿಗೆ ‘ಗೊತ್ತಿಲ್ಲ’ ಎಂಬ ಉತ್ತರವೇ ಲಭ್ಯವಾಗಿದ್ದು, ಈ ವೇಳೆ ಯುವತಿ ಜೊತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಬಗ್ಗೆ ಎಸ್​ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿದಾಗ ಅದಕ್ಕೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಆದರೆ, ಅದನ್ನು ಅಷ್ಟಕ್ಕೇ ಬಿಡದ ಅಧಿಕಾರಿಗಳು ಕರೆಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ರಮೆಶ್​ ಜಾರಕಿಹೊಳಿ ಮುಂದಿಟ್ಟು ಶಾಕ್ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಎಸ್​ಐಟಿ ಅಧಿಕಾರಿಗಳು ನೀಡಿದ ದಾಖಲೆಗಳನ್ನು ಕಂಡು ಬೆಚ್ಚಿಬಿದ್ದ​ ಜಾರಕಿಹೊಳಿ, ಆಕೆ ಯಾರು ಎಂಬುದೇ ಗೊತ್ತಿಲ್ಲ. ಮೊಬೈಲ್ ಬಗ್ಗೆ ನನಗೆ ಏನೂ ತಿಳಿದಿಲ್ಲ, ಅದರಲ್ಲಿ ನಾನು ಅನಕ್ಷರಸ್ಥ. ನಾನು ಆಕೆಯನ್ನು ಯಾವತ್ತೂ ಭೇಟಿಯಾಗಿಲ್ಲ ನನ್ನ ವಿರುದ್ಧ ಷಡ್ಯಂತ್ರ ಆಗಿದೆ ಮತ್ತು ಇದರ ಹಿಂದೆ ಮಹಾನಾಯಕ ಇದ್ದಾನೆ ಎಂದು ಉತ್ತರಿಸಿದ್ದಾರೆ.

ಹಾಗಾದರೆ ಆ ಮಹಾನಾಯಕ ಯಾರೆಂದು ಹೇಳಿ ಎಂದು ಎಸ್​ಐಟಿ ಪ್ರಶ್ನಿಸಿದಾಗ ಆತ ಯಾರು ಎಂಬುದನ್ನು ನೀವೇ ತನಿಖೆ ಮಾಡಿ ಎಂದು ಅಧಿಕಾರಿಗಳಿಗೇ ತಿರುಗುಬಾಣ ಬಿಟ್ಟಿದ್ದಾರೆ. ಸಿಡಿ ನಕಲಿ ಎನ್ನುವುದಕ್ಕೆ ದಾಖಲೆ ಕೊಡಿ ಎಂದಾಗಲೂ ಆರೋಪದ ಬಗ್ಗೆ ನೀವೇ ತನಿಖೆ ಮಾಡಿ ಎಂದಿದ್ದಾರೆ.

ಸತತ 4 ಗಂಟೆಯ ವಿಚಾರಣೆಯಲ್ಲಿ ಒಟ್ಟು 56 ಪ್ರಶ್ನೆಗಳನ್ನು ಕೇಳಲಾಗಿದ್ದು, ಎಸ್​ಐಟಿ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಡಿಸಿ ಅನುಚೇತ್, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಎಸಿಪಿ ಧರ್ಮೇಂದ್ರ ಅವರಿಂದ ವಿಚಾರಣೆ ನಡೆಸಲಾಗಿದೆ.

error: Content is protected !!