ವಕಾಲತ್ತು ವಹಿಸದ ಸಿಡಿ ಲೇಡಿ ವಕೀಲ ಜಗದೀಶ್ ವಿರುದ್ಧ ಎಸ್ ಐ ಟಿ ದೂರು - BC Suddi
ವಕಾಲತ್ತು ವಹಿಸದ ಸಿಡಿ ಲೇಡಿ ವಕೀಲ ಜಗದೀಶ್ ವಿರುದ್ಧ ಎಸ್ ಐ ಟಿ ದೂರು

ವಕಾಲತ್ತು ವಹಿಸದ ಸಿಡಿ ಲೇಡಿ ವಕೀಲ ಜಗದೀಶ್ ವಿರುದ್ಧ ಎಸ್ ಐ ಟಿ ದೂರು

ಬೆಂಗಳೂರು: ಸಿಡಿ ಕೇಸ್ ಗೆ ಸಂಬಂಧಿಸಿದಂತೆ ಸಂತ್ರಸ್ತೆ ಪರ ಕೋರ್ಟ್ ನಲ್ಲಿ ವಾದಿಸುತ್ತಿರುವುದು ವಕೀಲ ಕೆ.ಎನ್.ಜಗದೀಶ್ ಅಲ್ಲ. ಬದಲಿಗೆ ಮಂಜು ಎನ್ನುವ ವಕೀಲ. ಹೌದು ಹೀಗೊಂದು ಶಾಕಿಂಗ್ ನ್ಯೂಸ್ ಕೊಟ್ಟ ಎಸ್ ಐ ಟಿ ಜಗದೀಶ್ ಅವರು ಸುಮ್ಮನೇ ಬೀದಿ ರಂಪಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಗದೀಶ್ ವಿರುದ್ಧ ಎಸ್ ಐಟಿ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ರಮೇಶ್ ಜಾರಕಿಹೊಳಿಗೆ ಐದನೇ ಬಾರಿ ನೋಟಿಸ್ -ಇಂದೂ ಮತ್ತೆ ವಿಚಾರಣೆ ಗೈರು

ಪ್ರಕರಣದಲ್ಲಿ ಜಗದೀಶ್ ಅನಾವಶ್ಯಕವಾಗಿ ಎಂಟ್ರಿ ಕೊಡುತ್ತಿದ್ದಾರೆ. ತನಿಖಾಧಿಕಾರಿಗಳಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆ.ಎನ್.ಜಗದೀಶ್, ಸಂತ್ರಸ್ತೆ ಹೇಳಿದ್ರಿಂದಲೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ. ಹಾಗೇನಾದರೂ ಇದ್ದಲ್ಲಿ ಎಸ್ ಐಟಿ ನನಗೆ ನೊಟೀಸ್ ನೀಡಲಿ, ನಾನು ಮಾಹಿತಿ ನೀಡುವುದನ್ನ ನಿಲ್ಲಿಸುತ್ತೇನೆ ಎಂದಿದ್ದಾರೆ.

error: Content is protected !!