'ಎಸ್‌ಐಟಿ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿದ್ದ ಸಾಕ್ಷ್ಯಗಳನ್ನು ನಾಶ ಮಾಡಿದೆ' - ಸಿಡಿ ಲೇಡಿ ಆರೋಪ - BC Suddi
‘ಎಸ್‌ಐಟಿ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿದ್ದ ಸಾಕ್ಷ್ಯಗಳನ್ನು ನಾಶ ಮಾಡಿದೆ’ – ಸಿಡಿ ಲೇಡಿ ಆರೋಪ

‘ಎಸ್‌ಐಟಿ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿದ್ದ ಸಾಕ್ಷ್ಯಗಳನ್ನು ನಾಶ ಮಾಡಿದೆ’ – ಸಿಡಿ ಲೇಡಿ ಆರೋಪ

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾಗಿದ್ದ ಸಿಡಿ ಪ್ರಕರಣದ ಯುವತಿಯನ್ನು ವಿಚಾರಣೆ ಮಾಡುತ್ತಿದ್ದ ಎಸ್​ಐಟಿ ಅಧಿಕಾರಿಗಳು, ಆಕೆ ವಾಸವಿದ್ದ ಪಿಜಿಯನ್ನ ಪಂಚನಾಮೆ ಮಾಡುವ ನೆಪದಲ್ಲಿ ರಮೇಶ್​ ಅಣತಿಯಂತೆ ಅಲ್ಲಿದ್ದ ಪ್ರಮುಖ ಸಾಕ್ಷ್ಯ ನಾಶ ಮಾಡಲಾಗಿದೆಯೇ ಎಂದು ಸಿ.ಡಿ ಯುವತಿ ಆರೋಪ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಸಿ.ಡಿ ಲೇಡಿ ಇಂದು ನಗರ ಪೊಲೀಸ್​ ಆಯುಕ್ತರಿಗೆ ಎಸ್​ಐಟಿ ಮತ್ತು ಜಾರಕಿಹೊಳಿ ವಿರುದ್ಧ ಬರೆದಿರುವ ಪತ್ರದಲ್ಲಿ ಸಾಕ್ಷ್ಯ ನಾಶದ ಬಗ್ಗೆ ಪ್ರಸ್ತಾಪಿಸಿದ್ದಾಳೆ ಎನ್ನಲಾಗಿದೆ.

‘ಭವಿಷ್ಯ ನುಡಿಯಲು ನೀವು ದೇವರಾ, ಸೂಪರ್‌ ಹ್ಯೂಮನಾ’ – ಮೋದಿಗೆ ದೀದಿ ಪ್ರಶ್ನೆ

ಇನ್ನು ರಮೇಶ್ ಕೊಟ್ಟಿರುವ ದೂರಿನಲ್ಲಿ ನನ್ನ ಹೆಸರು ಉಲ್ಲೇಖವಾಗಿಲ್ಲ. ಆದರೂ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿ ಇರುವ ಸಾಕ್ಷ್ಯಗಳನ್ನು ನಾಶ ಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರದ ಒತ್ತಡಕ್ಕೆ ಎಸ್​ಐಟಿ ಮಣಿದಿದೆ ಎಂದು ಸಿಡಿ ಯುವತಿ ಆರೋಪ ಮಾಡಿದ್ದಾಳೆ.

error: Content is protected !!