ಯಾರು ಎನು ಹೇಳಿದರೂ ಎಸ್ಐಟಿ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆಯ ಎಲ್ಲ ಅಂಶಗಳು ಹೊರಬರುತ್ತದೆ : ಬೊಮ್ಮಾಯಿ - BC Suddi
ಯಾರು ಎನು ಹೇಳಿದರೂ ಎಸ್ಐಟಿ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆಯ ಎಲ್ಲ ಅಂಶಗಳು ಹೊರಬರುತ್ತದೆ : ಬೊಮ್ಮಾಯಿ

ಯಾರು ಎನು ಹೇಳಿದರೂ ಎಸ್ಐಟಿ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆಯ ಎಲ್ಲ ಅಂಶಗಳು ಹೊರಬರುತ್ತದೆ : ಬೊಮ್ಮಾಯಿ

ರಾಜ್ಯ ರಾಜಕೀಯದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸಿಡಿ ಪ್ರಕರಣ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಸ್ಐಟಿ ಸರಿಯಾದ ಸರಿಯಾದ ರೀತಿಯಲ್ಲಿ ಕರ್ತವ್ಯ ಮಾಡುತ್ತಿದೆ ಎಲ್ಲವೂ ಕಾನೂನು ಪ್ರಕಾರ ನಡೆಯುತ್ತಿದೆ ಎಂದಿದ್ದಾರೆ.

ನಿನ್ನೆ ಸೋಮವಾರ ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಪ್ರಕರಣದಲ್ಲಿರುವ ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ವಿಚಾರದ ಬಗ್ಗೆ ಯಾವುದೇ ಉತ್ತರ ನೀಡಲು ನಿರಾಕರಿಸಿದರು.

ಎಸ್ಐಟಿ ಡಿವೈಎಸ್ಪಿಯವರು ಪೋಷಕರಿಗೆ ಒತ್ತಡ ನೀಡಿದ್ದಾರೆ ಎಂದು ಯುವತಿ ಮಾಡಿರುವ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ವಿಷಯದಲ್ಲಿ ಯಾರು ಎನು ಹೇಳಿದರೂ ಎಸ್ಐಟಿ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆಯ ಎಲ್ಲ ಅಂಶಗಳು ಹೊರಬರುತ್ತದೆ. ಸದ್ಯ ಪರ ಹಾಗೂ ವಿರೋಧ ಮಾತುಗಳು ಹೊಸ ಹೊಸ ತಿರುವುಗಳು ಸಹಜ ಎಂದಿದ್ದಾರೆ.

error: Content is protected !!